ಮೇಷ
ಕೆಲವು ವ್ಯಕ್ತಿಗತ ಕಾರಣಗಳಿಂದ ಮಾನಸಿಕವಾಗಿ ಬಳಲುವಿರಿ. ಇದರಿಂದ ದೈಹಿಕವಾಗಿಯೂ ಪರಿಣಾಮವಾಗಲಿದೆ. ಹೊಂದಾಣಿಕೆ ಮುಖ್ಯ.
ವೃಷಭ
ಸೂಕ್ಷ್ಮ ಸಂವೇದಿಯಾಗಿ ವರ್ತಿಸುವಿರಿ. ಸಣ್ಣ ವಿಷಯಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವಿರಿ. ನಿಮಗರಿವಿಲ್ಲದೇ ಸಮಸ್ಯೆಯನ್ನು ಆಹ್ವಾನಿಸುವಿರಿ.
ಮಿಥುನ
ಆಪ್ತರಿಂದ ನಿರ್ಲಕ್ಷ್ಯ ಎದುರಿಸುವಿರಿ. ಇದು ನಿಮಗೆ ನೋವು ತರುವುದು. ಮಾನಸಿಕ ಅಶಾಂತಿಯು ನಿಮ್ಮ ವೃತ್ತಿ ಜೀವನದ ಮೇಲೂ ಪರಿಣಾಮ ಬೀರೀತು.
ಕಟಕ
ಸಣ್ಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡೀತು. ಕೌಟುಂಬಿಕ ವ್ಯವಹಾರ ತೃಪ್ತಿದಾಯಕ. ಮಾನಸಿಕ ಆಶಾಂತಿಗೆ ಕಾರಣವಾದ ಸಮಸ್ಯೆಯೊಂದು ಪರಿಹಾರ ಕಂಡೀತು.
ಸಿಂಹ
ಆಸ್ತಿಪಾಸ್ತಿಗೆ ಸಂಬಂಸಿ ವ್ಯವಹಾರದಲ್ಲಿ ಹಿನ್ನಡೆಯಾದೀತು. ವೃತ್ತಿಕ್ಷೇತ್ರದಲ್ಲಿ ಉದ್ವಿಗ್ನತೆ, ಅಸಹಕಾರ. ಕೌಟುಂಬಿಕ ವಾತಾವರಣದಲ್ಲಿ ಶಾಂತಿ ಪಡೆಯುವಿರಿ.
ಕನ್ಯಾ
ಕೌಟುಂಬಿಕ ವ್ಯವಹಾರಕ್ಕೆ ಹೆಚ್ಚು ಗಮನ ಕೊಡಬೇಕಾಗುವುದು. ಇದರಿಂದಾಗಿ ಇತರ ಹೊಣೆಗಾರಿಕೆಯ ಕೆಲಸ ಹಿಂದೆ ಬೀಳಬಹುದು. ಆರ್ಥಿಕ ಒತ್ತಡ.
ತುಲಾ
ಹಲವಾರು ವಿಷಯಗಳು ನಿಮ್ಮನ್ನು ಕಾಡುತ್ತಿವೆ. ಇದರಿಂದಾಗಿ ಗೊಂದಲದ ಮನಸ್ಥಿತಿ. ಆದರೆ, ನಿಮಗೊದಗುವ ಅವಕಾಶ ಕೈಚೆಲ್ಲಬೇಡಿ. ಕೌಟುಂಬಿಕ ಒತ್ತಡ.
ವೃಶ್ಚಿಕ
ಆರೋಗ್ಯ ಸಮಸ್ಯೆ ಕಾಡಬಹುದು. ಕೆಲವು ಪ್ರಮುಖ ವಿಷಯಗಳಲ್ಲಿ ಅನಿಶ್ಚಿತತೆ ನಿಮ್ಮನ್ನು ಕಾಡುತ್ತದೆ. ವಿವೇಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ.
ಧನು
ಹೊಸ ವ್ಯವಹಾರ ಆರಂಭಿಸಲು ಸೂಕ್ತ ಕಾಲವಲ್ಲ. ಹಣಕಾಸು ವ್ಯವಹಾರ ಹೊಂದಿರುವ ಜನಗಳ ಜತೆ ಎಚ್ಚರದಿಂದ ಮತ್ತು ತಾಳ್ಮೆಯಿಂದ ವ್ಯವಹರಿಸಿ.
ಮಕರ
ಮಾನಸಿಕ ಒತ್ತಡ. ನಿಮ್ಮ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವ ಸಾಧ್ಯತೆಯಿದೆ. ನಿಮ್ಮಿಂದ ಪ್ರಮಾದ ಸಂಭವಿಸಬಹುದು. ಎಚ್ಚರದಿಂದಿರಿ.
ಕುಂಭ
ಕುಟಂಬದಲ್ಲಿ ಶಾಂತಿ ಕಾಪಾಡಲು ಆದ್ಯತೆ ಕೊಡಿ. ವಾಗ್ವಾದ, ಟೀಕೆ, ರೇಗುವಿಕೆ ಒಳ್ಳೆಯದಲ್ಲ. ವೃತ್ತಿಯಲ್ಲಿ ಹೊಸ ಒತ್ತಡ, ಹೆಚ್ಚುವರಿ ಹೊಣೆಗಾರಿಕೆ ಬೀಳಬಹುದು.
ಮೀನ
ಖರ್ಚು ಅಕವಾಗಿ ಏರಲಿದೆ. ಅದನ್ನು ನಿಯಂತ್ರಿಸಿ. ಆಹಾರ ಸೇವನೆಯಲ್ಲಿ ಎಚ್ಚರ ತಪ್ಪಿದರೆ ಆರೋಗ್ಯ ಕೆಡಬಹುದು. ಕೌಟುಂಬಿಕ ಮನಸ್ತಾಪ.