ದಿನಭವಿಷ್ಯ: ನಿಮ್ಮ ಖುಷಿಯ ಮೂಲ ಕುಟುಂಬ, ಮನೆಯವರ ಏಳಿಗೆಗೆ ಸಮಯ ನೀಡಿ

ಮೇಷ
ಸಹೋದ್ಯೋಗಿಗಳ ಜತೆ  ಸ್ನೇಹದ ಸೇತುವೆ ಕಟ್ಟಿ. ಅಧಿಕಾರ ಚಲಾವಣೆ ಫಲ ನೀಡದು. ಕುಟುಂಬದಲ್ಲಿ ವಾಗ್ವಾದ ನಡೆದೀತು. ಆರೋಗ್ಯ ಸ್ಥಿರ.

ವೃಷಭ
ಹಳೆಯದನ್ನು ನೆನಪಿಸಿ ಕೊಂಡು ಕೊರಗಬೇಡಿ.ಬದಲಾವಣೆಗೆ ಒಗ್ಗಿ ಕೊಳ್ಳಿ. ಭಾವನಾತ್ಮಕ  ವಿಷಯವೊಂದು ಮನಸ್ಸು ಕದಡಿಸಬಹುದು.

ಮಿಥುನ
ವೃತ್ತಿಯಲ್ಲಿ ಫಲಪ್ರದ ದಿನ. ತೃಪ್ತಿಕರ ಸಾಧನೆ. ನಿಮ್ಮ ಮೇಲೆ ಪ್ರಭಾವ ಬೀರಬಲ್ಲ ವ್ಯಕ್ತಿಯ ಭೇಟಿ. ಕೌಟುಂಬಿಕ ನೆಮ್ಮದಿ. ಆರ್ಥಿಕ ಲಾಭ ಸಿಗುವುದು.

ಕಟಕ
ನಿಮ್ಮ ಸಂತೋಷದ ಮೂಲ ಕುಟುಂಬ. ಹಾಗಾಗಿ ಕುಟುಂಬದ ಏಳಿಗೆಗೆ ಆದ್ಯತೆ ಕೊಡಿ. ನಿಮ್ಮ ಹೊಣೆಯಿಂದ ಜಾರಿಕೊಳ್ಳಬೇಡಿ. ಆರೋಗ್ಯ ಸುಧಾರಣೆ.

ಸಿಂಹ
ಕಾರ್‍ಯದಲ್ಲಿ ತೊಡಕು. ನಿಮ್ಮ ನೈಪುಣ್ಯತೆ ಈ ತೊಡಕು ನಿವಾರಿಸಲು ಸಹಾಯ ನೀಡುವುದು. ಹಣಕಾಸು ವಿಷಯಕ್ಕೆ ಸಂಬಂಧಿಸಿ ಗೊಂದಲ ಸೃಷ್ಟಿಯಾದೀತು.

ಕನ್ಯಾ
ದಿನವಿಡೀ ಹರ್ಷ ಚಿತ್ತರಾಗಿ ಇರಲು ಪ್ರಯತ್ನಿಸಿ. ಸಣ್ಣ ವಿಷಯಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.ಆಪ್ತರ ಸಂಗದಲ್ಲಿ ಸಂತೋಷ.

ತುಲಾ
ನಿಮ್ಮ ಕಠಿಣ ದುಡಿಮೆಗೆ ಒಳ್ಳೆಯ ಪ್ರತಿಫಲ ದೊರಕುವುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸಂಭವ. ವಾಗ್ವಾದ ತಪ್ಪಿಸಿ.
ತಾಳ್ಮೆ ಇರಲಿ

ವೃಶ್ಚಿಕ
ಇಂದು ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ಸಮಸ್ಯೆಯೊಂದು ಪರಿಹಾರ ಕಾಣುವುದು. ಆರ್ಥಿಕ ಪರಿಸ್ಥಿತಿ ಚೇತರಿಕೆ.ಕೌಟುಂಬಿಕವಾಗಿ ಶಾಂತಿ, ಸಮಾಧಾನ

ಧನು
ಬಂಧುಗಳ ಜತೆ ವಾಗ್ವಾದಕ್ಕೆ ಇಳಿಯದಿರಿ. ಅದರಿಂದ ನಿಮಗೇ ಹಾನಿ. ಜೀವನಶೈಲಿ ಬದಲಿಸಿಕೊಳ್ಳಲು ಯೋಚಿಸಿ. ಸಹನೆಯಿರಲಿ.

ಮಕರ
ಕೆಲವು ಕೆಲಸಗಳನ್ನು ಅವಸರದಿಂದ ಪೂರೈಸಲು ಯತ್ನಿಸದಿರಿ. ಅದರಿಂದ ಪ್ರತಿಕೂಲವೇ ಆದೀತು. ದೈಹಿಕ ಶ್ರಮದಿಂದ ಸುಸ್ತು. ಕೌಟುಂಬಿಕ ಸಂತೋಷ.

ಕುಂಭ
ಸೂಕ್ಷ್ಮ ಸಂವೇದಿಯಾಗಿ ಇಂದು ವರ್ತಿಸುತ್ತೀರಿ. ಕೌಟುಂಬಿಕ ಬೆಳವಣಿಗೆಯೊಂದು ಇದಕ್ಕೆ ಕಾರಣ ವಾಗುತ್ತದೆ.ನಿಮ್ಮನ್ನು ಕಡೆಗಣಿಸಿದ ಭಾವನೆ.

ಮೀನ
ಕುಟುಂಬಸ್ಥರ ಸಂಗದಲ್ಲಿ ಹೆಚ್ಚು  ಖುಷಿ ಕಾಣುವಿರಿ. ವಿವಾಹಿತರ ಮಧ್ಯೆ ಭಿನ್ನಾಭಿಪ್ರಾಯ. ಸಣ್ಣ ವಿಷಯ ಸಂಘರ್ಷಕ್ಕೆ ಕಾರಣವಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!