Thursday, December 25, 2025

ದಿನಭವಿಷ್ಯ: ಇಂದು ಕಠಿಣ ನಿರ್ಣಯವೊಂದನ್ನು ತೆಗೆದುಕೊಳ್ಳುವಿರಿ, ಒಳ್ಳೆಯದೇ ಆಗಲಿದೆ

ಮೇಷ
ವೃತ್ತಿ ಒತ್ತಡದಿಂದ ವಿರಾಮ. ಆದರೆ ಕೌಟುಂಬಿಕ ಒತ್ತಡ ಎದುರಿಸುವಿರಿ. ಕೆಲವರ ಅಸಹಕಾರ. ಅನಿರೀಕ್ಷಿತ ಖರ್ಚು ಒದಗುವುದು.            
ವೃಷಭ
ಮನೆಯಲ್ಲಿ ಉಲ್ಲಾಸ. ಬಂಧುಗಳ ಜತೆ ಕಾಲಕ್ಷೇಪ. ಕುಟುಂಬಸ್ಥರ ಉತ್ತಮ ಸಹಕಾರ.ಆರ್ಥಿಕ ಕೊರತೆ ಕಾಡಿದರೂ ಅದನ್ನು ನಿಭಾಯಿಸುವಿರಿ.  
ಮಿಥುನ
ನಿರ್ಭೀತಿಯಿಂದ ಕಾರ್ಯ ನಿರ್ವಹಿಸಿ. ಕೆಲವರ ಒತ್ತಡಕ್ಕೆ ಮಣಿಯಬೇಡಿ. ಹಣದ ಕೊರತೆ ಕಾಡೀತು. ಸೂಕ್ತ ಸಹಕಾರ ಸಿಗಲಿದೆ.  
ಕಟಕ
ಕೌಟುಂಬಿಕ ವಿಷಯದಲ್ಲಿ ಮಹತ್ವದ ಬೆಳವಣಿಗೆ. ಕಾಡುತ್ತಿದ್ದ ಸಮಸ್ಯೆ ಪರಿಹಾರ. ಬಂಧುಗಳ ಜತೆಗಿನ ವಿರಾಸ ಶಮನ. ಸಿಂಹ
ಯಾವುದೋ ವಿಷಯ ಮನದ ನೆಮ್ಮದಿ ಕೆಡಿಸಿದರೂ ಮಧ್ಯಾಹ್ನದ ವೇಳೆಗೆ ಎಲ್ಲ ಸುರಳೀತ. ವಾಗ್ವಾದಕ್ಕೆ ಆಸ್ಪದ ಕೊಡಬೇಡಿ.    
ಕನ್ಯಾ
ಕೆಲಸದಲ್ಲಿ ಹೆಚ್ಚು ಬದ್ಧತೆ ತೋರಿ. ಕಾಟಾಚಾರದ ಕೆಲಸ ತರವಲ್ಲ.  ಜಡತ್ವ ತೊರೆಯಿರಿ. ಸಂಸಾರಿಕ ತಾಪತ್ರಯ ಹೆಚ್ಚು.  
ತುಲಾ
ಕಠಿಣ ನಿಲುವು ತಳೆಯಲೇಬೇಕಾದ  ಪ್ರಸಂಗ ಬಂದೀತು. ಕೆಲವರಿಗೆ ನೋವಾದೀತು. ಆದರೆ ನಿಮ್ಮ ಹಿತಾಸಕ್ತಿ ಮುಂದೆ ಅದು ಗೌಣ.
ವೃಶ್ಚಿಕ
ಖಾಸಗಿ ಬದುಕಲ್ಲಿ  ಶುಭ ಬೆಳವಣಿಗೆ. ಕೌಟುಂಬಿಕ ಭಿನ್ನಮತ ಪರಿಹಾರ, ಸಮಾಧಾನಕರ ಪರಿಸ್ಥಿತಿ. ಆಪ್ತ ವ್ಯಕ್ತಿಯ ಸಾಹಚರ್ಯದಲ್ಲಿ ಖುಷಿ.
ಧನು
 ಮನೆಯಲ್ಲಿ ಭಿನ್ನಮತ. ಹೊಂದಾಣಿಕೆ ಮುಖ್ಯ. ನಿಮ್ಮದೇ ನಿಲುವು ಸರಿಯೆಂದು ಹಠ ಹಿಡಿಯಬೇಡಿ. ಹಣದ ಒತ್ತಡ ಸಂಭವ.    
ಮಕರ
 ಮನೆಯಲ್ಲಿ ಸಣ್ಣಪುಟ್ಟ ಸಂಘರ್ಷ ತಪ್ಪಿಸಿ. ಮನಶ್ಯಾಂತಿ ಕಾಪಾಡಲು ಆದ್ಯತೆ ಕೊಡಿ. ಕೆಲವರ ಒತ್ತಡ ಎದುರಿಸುವಿರಿ.
ಕುಂಭ
ನಿಮ್ಮ ಮನಶ್ಯಾಂತಿ ಹಾಳು ಮಾಡಲು ಕೆಲವರ ಯತ್ನ. ಆಪ್ತರ ವಿಶ್ವಾಸ ಕಳಕೊಳ್ಳಬೇಡಿ. ಎಲ್ಲರ ಜತೆ ಹೊಂದಾಣಿಕೆಯಿಂದ ನಿಭಾಯಿಸಿ.      
 ಮೀನ
ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸುವಿರಿ. ಕೆಲವು ವಿಷಯ ಚಿಂತೆಗೆ ಕಾರಣವಾಗಲಿದೆ. ಕೌಟುಂಬಿಕ ವಾಗ್ವಾದಕ್ಕೆ ಆಸ್ಪದ ನೀಡದಿರಿ.  

error: Content is protected !!