ಮೇಷ
ಸಹೋದ್ಯೋಗಿ ನಿಮಗೆ ತೊಂದರೆ ಸೃಷ್ಟಿಸಬಹುದು. ಸಹನೆ ಕಾಯ್ದುಕೊಳ್ಳಿ. ಹಣ ಗಳಿಕೆ ಕಷ್ಟಕರವಾಗಲಿದೆ. ಸಂಗಾತಿ ಜತೆ ವಾಗ್ವಾದ ನಡೆದೀತು.
ವೃಷಭ
ವೃತ್ತಿ ಕ್ಷೇತ್ರದಲ್ಲಿ ಸಹಕಾರ. ಕೆಲಸ ಸುಲಲಿತ. ಆರ್ಥಿಕ ಸಮಸ್ಯೆ ಕಾಡದು. ಭಾವನಾತ್ಮಕವಾಗಿ ಸಂತೋಷದ ಮನಸ್ಥಿತಿ. ಆಪ್ತರ ಜತೆ ಕಾಲಕ್ಷೇಪ.
ಮಿಥುನ
ಪ್ರೀತಿಪಾತ್ರರ ಜತೆ ಅಹಂ ಬಿಟ್ಟು ವರ್ತಿಸಿ. ತಗ್ಗುವುದರಿಂದ ಸಂಬಂಧ ಉಳಿದೀತು. ಖರ್ಚು ಅಽಕ. ತಲೆನೋವು ಕಾಡಬಹುದು.
ಕಟಕ
ವೃತ್ತಿಯಲ್ಲಿ ಹೆಚ್ಚುವರಿ ಹೊಣೆ. ಬೇರೆ ವಿಚಾರಗಳತ್ತ ಗಮನ ಹರಿಯದು. ಹಣದ ಸಮಸ್ಯೆ ಒದಗಿದರೂ ಬಳಿಕ ಪರಿಹಾರ. ಸಿಂಹ
ಪ್ರಗತಿಯ ದಿನ. ವೃತ್ತಿ ಮತ್ತು ಖಾಸಗಿ ಬದುಕಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಅನಿರೀಕ್ಷಿತ ಖರ್ಚು ಒದಗಲಿದೆ. ಆರೋಗ್ಯ ಸುಸ್ಥಿರ.
ಕನ್ಯಾ
ಕೆಲ ವಿಚಾರಗಳಲ್ಲಿ ಇಂದು ಎಚ್ಚರಿಕೆಯಿಂದ ನಡಕೊಳ್ಳಿ. ಕೆಲಸದಲ್ಲಿ ಪ್ರಮಾದ, ಆಪ್ತರ ಜತೆ ಸಂಘರ್ಷ ನಡೆದೀತು. ತಾಳ್ಮೆಯ ನಡೆ ಅವಶ್ಯ.
ತುಲಾ
ವೃತ್ತಿ ಕ್ಷೇತ್ರದಲ್ಲಿ ಬದಲಾವಣೆ ಆದೀತು. ಹೊಣೆ ನಿಭಾಯಿಸುವಲ್ಲಿ ಎಚ್ಚರವಿರಲಿ. ಹದ ತಪ್ಪಿದ ಮಾತು ಬೇಡ. ಸಣ್ಣ ಜಗಳ ದೊಡ್ಡದಾದೀತು.
ವೃಶ್ಚಿಕ
ಅಧಿಕ ಜವಾಬ್ದಾರಿ. ಭಾವುಕತೆ ಬದಿಗಿಟ್ಟು ಕೆಲಸದ ಮೇಲೆ ಗಮನ ಹರಿಸಿ. ಭಾವುಕ ಸನ್ನಿವೇಶ ಎದುರಿಸುವಿರಿ. ಹಣದ ವಿಚಾರದಲ್ಲಿ ಕ್ಲಿಷ್ಟ ಪರಿಸ್ಥಿತಿ.
ಧನು
ಕೆಲಸದಲ್ಲಿ ಅತೀವ ಶ್ರದ್ಧೆ ವಹಿಸುವಿರಿ. ಕೆಲಸ ಸಂಪೂರ್ಣ. ಹೆಚ್ಚುವರಿ ಆದಾಯ ಗಳಿಕೆ. ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ.
ಮಕರ
ಸಕಾಲದಲ್ಲಿ ನಿಮ್ಮ ಕೆಲಸ ಪೂರೈಸಲು ವಿಫಲ. ವಾಗ್ವಾದದಿಂದ ದೂರವಿರಿ. ವ್ಯವಹಾರದಲ್ಲಿ ಹಣದ ಕೊರತೆ. ಸಣ್ಣ ಮಟ್ಟಿನ ಆರೋಗ್ಯ ಸಮಸ್ಯೆ.
ಕುಂಭ
ಆತ್ಮೀಯರ ಜತೆ ಹರ್ಷದಿಂದ ಕಾಲ ಕಳೆಯುವಿರಿ. ಹಣ ಹೂಡಿಕೆಯಿಂದ ಲಾಭ. ಆರೋಗ್ಯ ಸಮಸ್ಯೆ ನಿವಾರಣೆ, ನಿರಾಳತೆ.
ಮೀನ
ಹೆಚ್ಚು ಒತ್ತಡ. ಕೆಲಸ ಅಽಕ. ಸಂಗಾತಿ ಜತೆಗೆ ಮಾತಿನ ಚಕಮಕಿ ನಡೆದೀತು. ಯಾವುದೋ ಹತಾಶ ಭಾವ ಕಾಡಲಿದೆ. ಧ್ಯಾನದಿಂದ ನೆಮ್ಮದಿ.



