February 23, 2026
Monday, February 23, 2026
spot_img

ದಿನಭವಿಷ್ಯ: ಕಳೆದು ಹೋಗಿದ್ದರ ಬಗ್ಗೆ ಕೊರಗುವುದು ಬೇಡ, ಫ್ಯೂಚರ್‌ ಬ್ರೈಟ್‌ ಇದೆ

ಮೇಷ
ಸತತ ಪ್ರಯತ್ನದಿಂದ ಇಷ್ಟಾರ್ಥ ಸಿದ್ಧಿ. ಕಚೇರಿ ಕಾರ್ಯ ಸುಗಮ. ಆರೋಗ್ಯ ಸ್ಥಿತಿಯೂ ಉತ್ತಮ. ಮನೆಯ ಚಿಂತೆ ಪರಿಹಾರದ ಸಂಕೇತ.

ವೃಷಭ
ಕಳೆದುದರ ಕುರಿತು ಕೊರಗುತ್ತಾ ಕೂರದಿರಿ. ಭವಿಷ್ಯದ ಬಗ್ಗೆ ಗಮನ ಹರಿಸಿ. ಜೀವನಶೈಲಿ, ಆಹಾರದಲ್ಲಿ ಬದಲಾವಣೆ ತರಲು ಯತ್ನಿಸಿರಿ.   ಮಿಥುನ
ಉದ್ಯೋಗ ಕ್ಷೇತ್ರದಲ್ಲಿ ಪೂರಕ ಬೆಳವಣಿಗೆ. ಕಾರ್ಯಸಿದ್ಧಿ. ಆರ್ಥಿಕ ಸ್ಥಿತಿ ತೃಪ್ತಿಕರ.  ಕೌಟುಂಬಿಕ ವಿರಸ ಶಮನ, ಸೌಹಾರ್ದ ವಾತಾವರಣ.
ಕಟಕ
ಕುಟುಂಬವು ನಿಮ್ಮ ಸಂತೋಷದ ಕೇಂದ್ರ. ಹಾಗಾಗಿ ಕೌಟುಂಬಿಕ ಹಿತಾಸಕ್ತಿಗೆ ಆದ್ಯತೆ ಕೊಡಿ. ಉದ್ಯಮದಲ್ಲಿ ತುಸು ಹಿನ್ನಡೆ ಸಂಭವ.    
ಸಿಂಹ
 ಕೆಲಸದಲ್ಲಿ ಮೂಡಿದ್ದ ಸಂಕಷ್ಟ ಪರಿಹಾರ. ಕುಟುಂಬ ಮತ್ತು ಸ್ನೇಹಿತರ ಜತೆ ಸಂಪರ್ಕವಿರಲಿ. ಉದ್ಯೋಗ ಬದಲಾವಣೆ ಒಳಿತು ತಾರದು.
ಕನ್ಯಾ
ಜೀವನಶೈಲಿ ಸುಧಾರಿಸಬೇಕು. ಯೋಗ, ಧ್ಯಾನ ಉತ್ತಮ. ಕೆಲಸದಲ್ಲಿ ಒತ್ತಡ ಹೆಚ್ಚು. ಹಳೆಯ ಸ್ನೇಹಿತರ ಭೇಟಿ. ಆರ್ಥಿಕ ಸ್ಥಿತಿ ಉತ್ತಮ.  
 ತುಲಾ
ಭವಿಷ್ಯದ ಬಗ್ಗೆ ಯೋಜನೆ ರೂಪಿಸಿ. ಇದ್ದುದರಲ್ಲೇ ತೃಪ್ತಿ ಪಡುವ ಜಾಯಮಾನ ನಿಮ್ಮದಲ್ಲ.  ವೃತ್ತಿ ಕ್ಷೇತ್ರದಲ್ಲಿ ವಾಗ್ವಾದ. ಸಹನೆ ಕಾಯ್ದುಕೊಳ್ಳಿ.
ವೃಶ್ಚಿಕ
ನೀವು ಬಯಸಿದಂತೆ ದಿನ ಸಾಗಲಿದೆ. ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಹೊಂದಾಣಿಕೆ. ಹಣಕಾಸು ಪರಿಸ್ಥಿತಿ ತೃಪ್ತಿಕರ. ಆರ್ಥಿಕ ಉನ್ನತಿ. ಧನು
ಯಾವುದೋ ವಿಷಯ ದ್ವಂದ್ವದಲ್ಲಿ ಕೆಡವಲಿದೆ. ಪರಿಸ್ಥಿತಿಗೆ ಸೂಕ್ತವಾಗಿ ವರ್ತಿಸಿ. ಕೌಟುಂಬಿಕ ಸೌಹಾರ್ದ. ಆರೋಗ್ಯ ಸಮಸ್ಯೆ.      
ಮಕರ
ಆರ್ಥಿಕ ಉನ್ನತಿ, ಉದ್ಯಮದಲ್ಲಿ ಯಶಸ್ಸು. ಅತಿಯಾದ ದೈಹಿಕ ಶ್ರಮ ಮೈನೋವಿಗೆ ಕಾರಣವಾದೀತು. ಶಾಂತ ಕೌಟುಂಬಿಕ ಪರಿಸರ.    
ಕುಂಭ
ನಿಮ್ಮ ಕೆಲಸದ ಮೇಲೆ ಹೆಚ್ಚು ಆಸ್ಥೆ ಇರಲಿ. ಇತರ ವಿಷಯಗಳತ್ತ ಗಮನ ಹರಿದು ನಿಮ್ಮ ಗುರಿ ತಪ್ಪದಿರಲಿ. ಆಹಾರ ಸೇವನೆ ಹಿತಮಿತವಿರಲಿ.
ಮೀನ
ಮಾನಸಿಕ ಒತ್ತಡ ದಿಂದಾಗಿ ನಿದ್ರಾಹೀನತೆ. ಸಂಗಾತಿ ಜತೆಗೆ ವಿರಸ. ತಾಳ್ಮೆ ಕಳಕೊಳ್ಳದಿರಿ. ವೃತ್ತಿಯಲ್ಲಿ ಗುರಿ ಸಾಧನೆ. ಖರ್ಚು ಅಽಕ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !