March 26, 2026
Thursday, March 26, 2026
spot_img

ದಿನಭವಿಷ್ಯ: ಇಂದು ಈ ರಾಶಿಯವರಿಗೆ ಉತ್ಸಾಹದ ಮನಸ್ಥಿತಿ, ವ್ಯವಹಾರದಲ್ಲಿ ಹೊಸ ಅವಕಾಶ

ಮೇಷ
ದುಡುಕಿನ ನಡೆ ಸಾಮರಸ್ಯ ಕೆಡಿಸೀತು. ನಿಮ್ಮ ಮನೋಭಾವ ಬದಲಿಸಿಕೊಳ್ಳಿ. ಕೆಲಸದ ಒತ್ತಡ ಹೆಚ್ಚು. ತಪ್ಪು ಘಟಿಸಬಹುದು.      
ವೃಷಭ
 ಇತ್ತೀಚಿಗೆ ಕೆಲಸದ ಪರಾಮರ್ಶೆ ನಡೆಸಿ. ಲೋಪ ತಿದ್ದಿಕೊಳ್ಳಿ. ನಿಮ್ಮ ಕೆಲಸ ಟೀಕಿಸಲ್ಪಟ್ಟರೆ  ಆ ಕುರಿತು ಅತಿಯಾಗಿ ಚಿಂತಿಸಬೇಡಿ.      
ಮಿಥುನ
ವೃತ್ತಿ ಒತ್ತಡ  ಎದುರಿಸುವಿರಿ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಆಪ್ತರ ಜತೆ ಭಿನ್ನಮತ ಸಂಭವ. ಹೊಂದಾಣಿಕೆ ಒಳಿತು.   ಕಟಕ
ಆತ್ಮೀಯ ಸಂಬಂಧ ಕೆಡದಂತೆ ಎಚ್ಚರ ವಹಿಸಿ. ಅನುಮಾನದ ಧೋರಣೆ ಬಿಡಿ. ವ್ಯವಹಾರದಲ್ಲಿ ಏರುಪೇರು ಸಂಭವ. ಆರ್ಥಿಕ ಒತ್ತಡ.     ಸಿಂಹ
ನಿಮ್ಮ ಯೋಜನೆ ಕಾರ್ಯಗತಗೊಳಿಸಲು ಹಿಂಜರಿಕೆ ಬೇಡ. ಯಶಸ್ಸು ಖಂಡಿತ. ದೈಹಿಕ ಸಮಸ್ಯೆ ಕಡೆಗಣಿಸಬೇಡಿ. ಏಕಾಂಗಿಗಳಿಗೆ ಸಂಗಾತಿ ಲಭ್ಯ.    
ಕನ್ಯಾ
ನಿರ್ಲಕ್ಷಿಸಲ್ಪಟ್ಟ ಖಾಸಗಿ ಸಮಸ್ಯೆ ಮತ್ತೆ ಎದ್ದು ನಿಲ್ಲಬಹುದು. ಶಾಶ್ವತ ಪರಿಹಾರ ಹುಡುಕಿ.  ವೃತ್ತಿಯಲ್ಲಿ ಉನ್ನತಿ, ಧನಪ್ರಾಪ್ತಿಯ ಸಾಧ್ಯತೆ.   ತುಲಾ
ಇತರರಿಂದ ದಕ್ಷತೆ, ವಿನಯ ನಿರೀಕ್ಷಿಸುವಿರಿ. ಆದರೆ ಎಲ್ಲರನ್ನು ನಿಯಂತ್ರಿಸುವುದು ಅಸಾಧ್ಯ.ಕೆಲವರ ವರ್ತನೆಯಿಂದ ಅಸಹನೆ.         ವೃಶ್ಚಿಕ
ಸಂತೋಷದ ದಿನ. ನಿಮ್ಮ ನಿರ್ಧಾರ ದೂರಗಾಮಿ ಪರಿಣಾಮ ಬೀರಲಿದೆ. ಆತ್ಮೀಯರ ಪ್ರೀತಿ, ವಿಶ್ವಾಸ ಗಳಿಸುವಿರಿ. ಕುಟುಂಬ ಸೌಹಾರ್ದ. ಧನು
ಕೆಲವರ ಬಗ್ಗೆ ವಿಧೇಯತೆ ಒಳ್ಳೆಯದೆ. ಆದರೆ ಅವರ ತಾಳಕ್ಕೆ ಕುಣಿಯಬೇಡಿ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ. ಧನವ್ಯಯ ಹೆಚ್ಚು.          ಮಕರ
ಉತ್ಸಾಹದ ಮನಸ್ಥಿತಿ. ವ್ಯವಹಾರದಲ್ಲಿ ಹೊಸ ಅವಕಾಶ ತೆರೆಯಲಿದೆ. ಚಿಂತೆ ಸೃಷ್ಟಿಸಿದ್ದ ಪರಿಸ್ಥಿತಿ ಇತ್ಯರ್ಥ ಕಾಣಲಿದೆ. ಬಂಧುಜನರ ಸಹಕಾರ.  
ಕುಂಭ
ಸಾಮಾಜಿಕ, ಆರ್ಥಿಕ ಮತ್ತು ಖಾಸಗಿ ಬದ್ಧತೆ ಪೂರೈಸಲು ಅದ್ಯತೆ ಕೊಡಿ.  ಬಿಡುವಿಲ್ಲದ ಕೆಲಸದಿಂದ ವಿರಾಮ ಪಡೆಯಿರಿ.  ಆರೋಗ್ಯ ಸುಸ್ಥಿರ.      
 ಮೀನ
ಇಂದು ಹೊಸದರ ಅನ್ವೇಷಣೆಗೆ ಮನ ಮಾಡುವಿರಿ. ಏರುಪೇರು ಇಲ್ಲದ ಶಾಂತ ಮನಸ್ಥಿತಿ.  ವ್ಯವಹಾರದಲ್ಲಿ ಆರ್ಥಿಕ ಅಡಚಣೆ ನಿವಾರಣೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !