February 3, 2026
Tuesday, February 3, 2026
spot_img

ದಿನಭವಿಷ್ಯ: ನಿಧಾನಕ್ಕೆ ಹೋದರೂ ಪರವಾಗಿಲ್ಲ, ಒಂದು ಹೆಜ್ಜೆ ಮುಂದಕ್ಕೇ ಇಡಿ

ಮೇಷ
ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಬಳಿಕ ನಿಮಗೆ ಪೂರಕ ಪರಿಸ್ಥಿತಿ. ಕೆಲ ವ್ಯಕ್ತಿಗಳಿಂದ ಕಿರಿಕಿರಿ ಎದುರಿಸುವಿರಿ. ಅವರನ್ನು ಕಡೆಗಣಿಸಿ.
ವೃಷಭ
ಯಾವುದೇ ಕಾರ್ಯವನ್ನು ಯೋಚಿಸಿ ನಡೆಸಿ. ಖರೀದಿಯಲ್ಲೂ ಎಚ್ಚರವಿರಲಿ. ಕಿಸೆ ಖಾಲಿಯಾದೀತು. ಕೌಟುಂಬಿಕ ಹೊರೆ ಅಽಕ.
ಮಿಥುನ
ಆಹಾರದ ವಿಷಯದಲ್ಲಿ ಜಾಗ್ರತೆ ಇರಲಿ. ಆರೋಗ್ಯ ಕೆಡಿಸಿಕೊಳ್ಳಬೇಡಿ. ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ ಸಂಭವ.
ಕಟಕ
ಉದ್ವಿಗ್ನತೆ ಅಽಕ. ಕೌಟುಂಬಿಕ ಸಮಸ್ಯೆ. ಅದನ್ನು ಪರಿಹರಿಸಲು ಅವರೊಡನೆ ಸೂಕ್ತ ಸಮಾಲೋಚನೆ ನಡೆಸುವುದೇ ಸೂಕ್ತ ದಾರಿ.      
ಸಿಂಹ
ನಿಮ್ಮ ದೈನಂದಿನ ಗುರಿ ಈಡೇರಿಕೆಗೆ  ಗಮನ ಕೊಡಿ. ಅದರಿಂದ ಎಲ್ಲವೂ ಸುಸೂತ್ರವಾಗುತ್ತದೆ. ಸುತ್ತಲಿರುವವರ ಜತೆ ತಿಕ್ಕಾಟ ತಪ್ಪಿಸಿ.
ಕನ್ಯಾ
ಕಾರ್ಯ ಸಿದ್ಧಿ. ಮಾನಸಿಕ ಗೊಂದಲ ನಿವಾರಣೆ. ಆರೋಗ್ಯದ ಕುರಿತಾದ ಚಿಂತೆ ಪರಿಹಾರ.  ಕುಲದೇವರ ಪ್ರಾರ್ಥನೆ ಮಾಡಿ. ನನ್ನ ಏಳಿಗೆ ನಿಧಾನ ಎನಿಸುತ್ತಿದ್ದರೆ ಭಯಪಡಬೇಡಿ. ನಿಧಾನವಾದರೂ ಪರವಾಗಿಲ್ಲ, ಹೆಜ್ಜೆ ಮುಂದಕ್ಕಿಡಿ
ತುಲಾ
ನಿಮ್ಮ ಇಂದಿನ ಕಾರ್ಯ ನಾಳೆಗೆ ಪರಿಣಾಮ ಬೀರಲಿದೆ. ಮಹತ್ವದ ನಿರ್ಧಾರ ಯೋಚಿಸಿ ತೆಗೆದುಕೊಳ್ಳಿ. ಸಹಕಾರ ಪಡೆಯಿರಿ.
ವೃಶ್ಚಿಕ
ಸಾಹಸದ ಪ್ರವೃತ್ತಿ ನಿಮ್ಮನ್ನು ದುಸ್ಸಾಹಸಕ್ಕೆ ಪ್ರೇರೇಪಿಸಬಹುದು. ಎಚ್ಚರ ವಹಿಸಿ. ಉದ್ಯೋಗ
ದಲ್ಲಿ ಕಿರಿಕಿರಿ. ಸಹೋದ್ಯೋಗಿಗಳ ಅಸಹಕಾರ. ತಾಳ್ಮೆ ಇರಲಿ.
ಧನು
ಏಕಕಾಲದಲ್ಲಿ ವಿವಿಧ ಬಗೆಯ ಚಿಂತೆ ಕಾಡಬಹುದು. ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿ ಕೊಂಡು ನಡೆಯುವುದೇ ಸೂಕ್ತ ದಾರಿ. ಸಾಮಾನ್ಯ ದಿನ
ಮಕರ
ಮನಸ್ಸು ವಿಚಲಿತ ಆಗುವ ಬೆಳವಣಿಗೆ ನಡೆದೀತು. ಎಚ್ಚರಿಕೆಯ ಹೆಜ್ಜೆಯಿಡಿ. ಆರ್ಥಿಕವಾಗಿ ಸಣ್ಣ ಹಿನ್ನಡೆ. ಬಂಧುಗಳ ಜತೆ ವಿರಸ. ಸಂಗಾತಿಯ ಜೊತೆ ಉತ್ತಮ ದಿನ ಕಳೆಯುವಿರಿ.
ಕುಂಭ
ವಿವಿಧ ದಿಕ್ಕು ಗಳಿಂದ ಒತ್ತಡ ಅನುಭವಿ ಸುತ್ತೀರಿ. ಮುಖ್ಯವಾಗಿ ನಿಮ್ಮ ಖಾಸಗಿ ಬದುಕಿನ ಮೇಲೆ ಇದು ಪರಿಣಾಮ ಬೀರುವುದು. ಗೊಂದಲ ಬೇಡ, ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ ನಿಮಗಿದೆ.
 ಮೀನ
ನೀವಿಂದು ನಿಮ್ಮ ಕಾಳಜಿಯ ವಿಷಯಗಳತ್ತ ಪ್ರಮುಖವಾಗಿ ಗಮನ ಹರಿಸಬೇಕು. ನಿಮ್ಮ ವ್ಯಕ್ತಿತ್ವದಲ್ಲಿ, ವರ್ತನೆಯಲ್ಲಿ ಬದಲಾವಣೆ ತರಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !