March 16, 2026
Monday, March 16, 2026
spot_img

ದಿನಭವಿಷ್ಯ: ಇಂದಿನ ಹೊಸ ಪ್ರಯತ್ನಗಳು ಕಾರ್ಯಕ್ಕೆ ಬೇಕಾದ ಉತ್ಸಾಹ ಕೊಡುವುದು ಖಚಿತ

ಮೇಷ
ಕೆಲವರು ನಿಮ್ಮ ಕಾರ್ಯಕ್ಕೆ ಅಡ್ಡಿ ತರುವರು. ಅದೃಷ್ಟವೂ ನಿಮ್ಮ ವಿರುದ್ಧವಾಗಿದೆ. ಹಾಗಾಗಿ ಪ್ರಮುಖ ಕೆಲಸಕ್ಕೆ ಕೈಹಾಕಬೇಡಿ.  
ವೃಷಭ
ನಿಮ್ಮ ಪಾಲಿಗೆ ಮಹತ್ವದ ದಿನ. ಶುಭ ಬೆಳವಣಿಗೆ. ಸಂಬಂಧ ವೃದ್ಧಿ. ಉದ್ದೇಶಿತ ಕಾರ್ಯ ಸ-ಲ.  ಪ್ರೀತಿಯಲ್ಲಿ ಯಶ ಸಿಗಲಿದೆ.  
ಮಿಥುನ
  ಸಂಬಂಧ ಹಾಳಾಗದಿರಲು ನಿಮ್ಮ ಅಹಂ ಬಿಡಿ. ಕುಟುಂಬದ ಸೌಹಾರ್ದತೆಗೆ ಆದ್ಯತೆ ಕೊಡಿ. ಆರೋಗ್ಯ ಸಮಸ್ಯೆ ಕಾಡಬಹುದು.  
ಕಟಕ
 ಹೆಚ್ಚು ಜವಾಬ್ದಾರಿ. ಆರ್ಥಿಕ ಬಿಕ್ಕಟ್ಟು ಉಂಟಾದರೂ ಬಳಿಕ  ಬೇಗ ಪರಿಹಾರ ಕಾಣಲಿದೆ. ಆತ್ಮೀಯರ ಜತೆ ಸಂವಹನ ಸಮಸ್ಯೆ, ವಿರಸ ಸಂಭವ.  
ಸಿಂಹ
ಆತ್ಮೀಯರಲ್ಲಿ ನಿಮ್ಮ ಭಾವನೆ ಹಂಚಿಕೊಳ್ಳಿ. ದುಗುಡ ಕಡಿಮೆ ಮಾಡಲು ಅದು ದಾರಿ. ಅಽಕ ವೆಚ್ಚದಿಂದ ಆರ್ಥಿಕ ಹೊರೆ.  ಆರೋಗ್ಯ ಸ್ಥಿರ.
ಕನ್ಯಾ
ಎಚ್ಚರದಿಂದ ಕಾರ್ಯ ನಿರ್ವಹಿಸಿ. ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ಆತ್ಮೀಯ ಸಂಬಂಧಕ್ಕೆ ಧಕ್ಕೆ ಬರಬಹುದು.    
ತುಲಾ
ಕೆಲಸದಲ್ಲಿ ಹೆಚ್ಚು ಜಾಗ್ರತೆ ವಹಿಸಿ. ನಡೆನುಡಿ ವಿವಾದವೆಬ್ಬಿಸದಂತೆ ನೋಡಿಕೊಳ್ಳಿ. ಸಣ್ಣ ವಿಷಯ ದೊಡ್ಡ ಕಲಹ ಸೃಷ್ಟಿಸಬಹುದು.  
ವೃಶ್ಚಿಕ
ಹೆಚ್ಚು ಹೊಣೆ. ಆದರೆ ಉಳಿದವರ ಅಸಹಕಾರ. ಕೆಲ ಬೆಳವಣಿಗೆ ನಿಮ್ಮನ್ನು ಹೆಚ್ಚು ಭಾವುಕಗೊಳಿಸುತ್ತದೆ. ಧನವ್ಯಯ ಅಽಕ.  
ಧನು
ಕಾಲಮಿತಿಯಲ್ಲಿ ಕಾರ್ಯ ಪೂರೈಕೆ. ಮನಸ್ಸಿಗೆ ನಿರಾಳತೆ. ಧನಗಳಿಕೆ. ಬಂಧು ಜತೆ ಆತ್ಮೀಯ ಕಾಲಕ್ಷೇಪ. ಮಿತಾಹಾರ ಸೇವಿಸಿ.
ಮಕರ
ನಿಮ್ಮ ಕೆಲಸಕ್ಕೆ ಸೂಕ್ತ ಬೆಂಬಲ ಸಿಗದು. ಆತ್ಮೀಯರೇ ಟೀಕಿಸುವರು. ಸಂಘರ್ಷದ ದಾರಿ ತುಳಿಯದಿರಿ. ಹೊಂದಾಣಿಕೆ ಒಳಿತು.          
ಕುಂಭ
ಆರ್ಥಿಕವಾಗಿ ಪೂರಕ ದಿನ. ವೆಚ್ಚ ತಗ್ಗಿಸುವಿರಿ. ಆದಾಯ ಹೆಚ್ಚಳ. ಪ್ರೀತಿಯ ವಿಚಾರದಲ್ಲಿ ಪೂರಕ ಬೆಳವಣಿಗೆ. ಕೌಟುಂಬಿಕ ಸೌಹಾರ್ದ.                    
 ಮೀನ
ಕೆಲಸದ ಒತ್ತಡ. ವಿರಾಮಕ್ಕೆ ಅವಕಾಶ ಸಿಗದು. ಯಾವುದೋ ವಿಷಯ ಮನದಲ್ಲಿ ಹತಾಶೆ, ಅಸಹನೆ ಸೃಷ್ಟಿಸುವುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !