ಭಾರತದಲ್ಲಿ ಪನೀರ್ ಶಾಕಾಹಾರಿಗಳ ಪ್ರಿಯ ಆಹಾರ. ಆದರೆ ಇತ್ತೀಚಿನ ದಿನಗಳಲ್ಲಿ ಪನೀರ್‌ಗೆ ಪೈಪೋಟಿಯಾಗಿ ಟೋಫು (Tofu) ಜನಪ್ರಿಯವಾಗುತ್ತಿದೆ. ಟೋಫು ಎನ್ನುವುದು ಸೊಯಾ ಹಾಲಿನಿಂದ ತಯಾರಾಗುವ ಪ್ರೋಟೀನ್ ಸಮೃದ್ಧ ಆಹಾರ. ಪನೀರ್ ಹಾಲಿನಿಂದ ತಯಾರಾಗುವ ಹಾಲು ಉತ್ಪನ್ನ. ಎರಡರಲ್ಲೂ ಪ್ರೋಟೀನ್, ಕ್ಯಾಲ್ಸಿಯಂ, ಹಾಗೂ ಪೋಷಕಾಂಶಗಳಿವೆ. ಆದರೆ ಪ್ರಶ್ನೆ ಏನೆಂದರೆ “ಟೋಫು ಮತ್ತು ಪನೀರ್‌ನಲ್ಲಿ ಯಾವುದು ಹೆಚ್ಚು ಆರೋಗ್ಯಕರ?” ಎನ್ನುವುದು. ನೋಡಿ, ಇಲ್ಲಿದೆ ಅದರ ಸ್ಪಷ್ಟ ವಿಶ್ಲೇಷಣೆ.
ಪೋಷಕಾಂಶದ ಹೋಲಿಕೆ:
ಪನೀರ್‌ನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚು ಇರುತ್ತದೆ, ವಿಶೇಷವಾಗಿ ಹಾಲಿನ ಕೊಬ್ಬು. ಇದು ದೇಹಕ್ಕೆ ಶಕ್ತಿ ನೀಡುತ್ತದೆ ಆದರೆ ಹೆಚ್ಚು ಸೇವಿಸಿದರೆ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
ಟೋಫುವಿನಲ್ಲಿ ಕೊಬ್ಬು ಕಡಿಮೆ, ಆದರೆ ಪ್ರೋಟೀನ್ ಪ್ರಮಾಣ ಹೆಚ್ಚು. ಆದ್ದರಿಂದ ಇದು ಹೃದಯಕ್ಕೆ ಹೆಚ್ಚು ಸುರಕ್ಷಿತ ಆಯ್ಕೆ.
ತೂಕ ಇಳಿಕೆಗೆ ಸಹಾಯಕ ಯಾರು?:
ತೂಕ ಕಡಿಮೆ ಮಾಡಲು ಬಯಸುವವರಿಗೆ ಟೋಫು ಉತ್ತಮ ಆಯ್ಕೆ. ಟೋಫು ಕಡಿಮೆ ಕ್ಯಾಲೊರಿಯುಳ್ಳದು, ಸ್ಯಾಚುರೇಟೆಡ್ ಫ್ಯಾಟ್ ಕಡಿಮೆ ಇರುತ್ತದೆ. ಪನೀರ್‌ನಲ್ಲಿ ಕೊಬ್ಬು ಹೆಚ್ಚಿರುವುದರಿಂದ ತೂಕ ಇಳಿಸಲು ಅಡ್ಡಿಯಾಗಬಹುದು.
ಶಾಕಾಹಾರಿಗಳಿಗೆ ಪ್ರೋಟೀನ್ ಮೂಲ:
ಎರಡೂ ಉತ್ತಮ ಪ್ರೋಟೀನ್ ಮೂಲಗಳು. ಆದರೆ ಟೋಫು ಸಸ್ಯ ಮೂಲದ ಪ್ರೋಟೀನ್ ಆಗಿರುವುದರಿಂದ ಸಂಪೂರ್ಣ ವೀಗನ್ ಆಹಾರಿಗಳಿಗೆ ಸೂಕ್ತ. ಪನೀರ್ ಹಾಲಿನಿಂದ ತಯಾರಾಗುವುದರಿಂದ ಅದು ಶಾಕಾಹಾರಿಗಳಿಗೆ ಸೀಮಿತ.
ಕ್ಯಾಲ್ಸಿಯಂ ಮತ್ತು ಎಲುಬುಗಳ ಆರೋಗ್ಯ:
ಪನೀರ್‌ನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚು ಇರುತ್ತದೆ. ಅದು ಎಲುಬುಗಳು ಮತ್ತು ಹಲ್ಲುಗಳಿಗೆ ಶಕ್ತಿದಾಯಕ. ಟೋಫುವಿನಲ್ಲೂ ಕ್ಯಾಲ್ಸಿಯಂ ಇದೆ, ಆದರೆ ಪ್ರಮಾಣ ಉತ್ಪಾದನಾ ವಿಧಾನಕ್ಕೆ ಅವಲಂಬಿತವಾಗಿರುತ್ತದೆ.
ರುಚಿ ಮತ್ತು ಬಳಕೆ:
ಪನೀರ್‌ನ ಮೃದುವಾದ ರುಚಿ ಭಾರತೀಯ ಪಾಕಶೈಲಿಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಪನೀರ್ ಬಟರ್ ಮಸಾಲಾ, ಪಾಲಕ್ ಪನೀರ್ ಮುಂತಾದ ಭೋಜನಗಳಲ್ಲಿ ಅದ್ಭುತವಾಗಿ ತಯಾರಿಸಬಹುದು. ಟೋಫು ಚೈನೀಸ್ ಅಥವಾ ಫ್ಯೂಷನ್ ಡಿಶ್‌ಗಳಿಗೆ ಹೆಚ್ಚು ಸೂಕ್ತ.
ಪನೀರ್ ಮತ್ತು ಟೋಫು ಎರಡಕ್ಕೂ ತಮ್ಮದೇ ಆದ ಪೋಷಕ ಲಾಭಗಳಿವೆ. ನೀವು ಹೃದಯ ಆರೋಗ್ಯ ಅಥವಾ ತೂಕ ಇಳಿಕೆ ಗುರಿ ಇಟ್ಟಿದ್ದರೆ ಟೋಫು ಆರಿಸಿಕೊಳ್ಳಿ. ಆದರೆ ಕ್ಯಾಲ್ಸಿಯಂ ಮತ್ತು ರುಚಿ ಬೇಕಾದರೆ ಪನೀರ್ ಉತ್ತಮ. ಎರಡನ್ನೂ ಮಿತ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಸಮತೋಲನ ಪೋಷಕಾಂಶ ದೊರೆಯುತ್ತದೆ.

