Friday, December 5, 2025

Kitchen tips | ಟೊಮ್ಯಾಟೊ ರೇಟ್‌ ಹೆಚ್ಚಾಗಿದೆ, ಇರೋದನ್ನೇ ಹೆಚ್ಚು ಕಾಲ ಫ್ರೆಶ್‌ ಆಗಿ ಇಟ್ಕೊಳಿ! ಟಿಪ್ಸ್‌ ಇಲ್ಲಿದೆ ನೋಡಿ..

ಭಾರತೀಯ ಅಡುಗೆಯ ರುಚಿಗೆ ಜೀವ ತುಂಬುವ ತರಕಾರಿಗಳಲ್ಲಿ ಟೊಮ್ಯಾಟೊ ಮೊದಲ ಸಾಲಿನಲ್ಲಿದೆ. ಸಾಂಬಾರ್, ಪಲ್ಯ, ಗ್ರೇವಿ ಯಾವ ಊಟ ಮಾಡಿದರೂ ಟೊಮ್ಯಾಟೊ ಇದ್ದರೆ ರುಚಿ ಮತ್ತಿಷ್ಟು ಹೆಚ್ಚುತ್ತದೆ. ಆದರೆ ಈ ತರಕಾರಿ ಬೇಗನೆ ಮೃದುವಾಗಿ ಹಾಳಾಗುವುದು ಸಾಮಾನ್ಯ. ಮಾರುಕಟ್ಟೆಯಿಂದ ತಂದು ಕೆಲವು ದಿನಗಳಲ್ಲೇ ಕೆಡುವ ಟೊಮ್ಯಾಟೊಗಳನ್ನು ದೀರ್ಘಕಾಲ ಉಳಿಸಿಕೊಳ್ಳಲು ಕೆಲವು ಸರಿಯಾದ ಸಂಗ್ರಹ ವಿಧಾನ ಇಲ್ಲಿದೆ.

  • ತಂದು ತಕ್ಷಣ ತೊಳೆಯಬೇಡಿ: ಟೊಮ್ಯಾಟೊಗಳನ್ನು ಮಾರುಕಟ್ಟೆಯಿಂದ ತಂದು ನೇರವಾಗಿ ತೊಳೆಯಬೇಡಿ. ತೊಳೆಯಬೇಕಾದರೆ ಚೆನ್ನಾಗಿ ಒಣಗಿಸಿ ನಂತರ ಫ್ರಿಡ್ಜ್‌ ನಲ್ಲಿ ಇಡಿ; ತೇವಾಂಶವೇ ಹಾಳಾಗುವ ಪ್ರಮುಖ ಕಾರಣ.
  • ಉಳಿದ ತರಕಾರಿ–ಹಣ್ಣುಗಳಿಂದ ದೂರ ಇಡಿ: ಇತರ ತರಕಾರಿಗಳು ಮತ್ತು ಹಣ್ಣುಗಳಿಂದ ಹೊರಬರುವ ಗ್ಯಾಸ್‌ಗಳು ಟೊಮ್ಯಾಟೊಗಳನ್ನು ಬೇಗ ಮೃದುಗೊಳಿಸುತ್ತವೆ. ಬುಟ್ಟಿ ಅಥವಾ ಬೇರೆ ಡಬ್ಬಿಯಲ್ಲಿ ಇಡುವುದು ಉತ್ತಮ.
  • ಪೇಪರ್‌ನಲ್ಲಿ ಸುತ್ತಿ ಫ್ರಿಡ್ಜ್‌ನಲ್ಲಿ ಇಡಿ: ಪ್ರತಿ ಟೊಮ್ಯಾಟೊವನ್ನೂ ಪೇಪರ್‌ನಲ್ಲಿ ಸುತ್ತಿದರೆ ತೇವಾಂಶ ಉಳಿಯುವುದಿಲ್ಲ ಹಾಗೂ ಟೊಮ್ಯಾಟೊ ಹೆಚ್ಚು ದಿನಗಳವರೆಗೆ ಫ್ರೆಶ್ ಆಗಿ ಉಳಿಯುತ್ತದೆ.
  • ಅರಿಶಿನ ನೀರಿನಲ್ಲಿ ತೊಳೆದು ಒಣಗಿಸಿ: ಮಾರುಕಟ್ಟೆಯಿಂದ ತಂದು ಅರಿಶಿನ ನೀರಿನಲ್ಲಿ ಒಂದು ಬಾರಿ ತೊಳೆದು ಒಣಗಿಸಿದರೆ ಬ್ಯಾಕ್ಟೀರಿಯಾ ನಾಶವಾಗುತ್ತದೆ,ಟೊಮ್ಯಾಟೊ ತಾಜಾತನ ಉಳಿಯುತ್ತದೆ.
  • ಹಣ್ಣಾದ ಟೊಮ್ಯಾಟೊ ಮೊದಲು ಬಳಸಿ: ಬಹಳ ಹಣ್ಣಾದ ಟೊಮ್ಯಾಟೊಗಳನ್ನು ಮೊದಲೇ ಬಳಸಿ ಅಥವಾ ಪ್ಯೂರಿ ಮಾಡಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದರೆ ವ್ಯರ್ಥವಾಗುವುದಿಲ್ಲ.
  • ಕಾಂಡದ ಭಾಗವನ್ನು ಕೆಳಗೆ ಇಡಿ: ಈ ವಿಧಾನ ಟೊಮ್ಯಾಟೊಗಳಲ್ಲಿರುವ ನೈಸರ್ಗಿಕ ತೇವ ಹೊರಬಾರದಂತೆ ತಡೆದು ಅವುಗಳನ್ನು ಹೆಚ್ಚು ದಿನ ಫ್ರೆಶ್‌ ಆಗಿರಿಸುತ್ತದೆ.
error: Content is protected !!