February 4, 2026
Wednesday, February 4, 2026
spot_img

Too Spicy🌶️ | ಬಾಯಲ್ಲಿ ನೀರೂರಿಸುವ ಖಾರ, ಆರೋಗ್ಯಕ್ಕೆ ತರಬಹುದು ಬೇಡದ ಭಾರ!

ನಮ್ಮಲ್ಲಿ ಹೆಚ್ಚಿನವರಿಗೆ ಊಟದಲ್ಲಿ ಖಾರ ಇಲ್ಲದಿದ್ದರೆ ತಿಂದ ಅನುಭವವೇ ಆಗುವುದಿಲ್ಲ. ಆದರೆ ವೈದ್ಯಕೀಯ ಲೋಕದ ಪ್ರಕಾರ, ಮಿತಿಮೀರಿದ ಖಾರ ಸೇವನೆಯು ನಿಮ್ಮ ದೇಹದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ತರುತ್ತದೆ.

ಅತಿಯಾದ ಖಾರದಿಂದ ಆಗುವ ತೊಂದರೆಗಳು:

ಅತಿಯಾದ ಖಾರ ಹೊಟ್ಟೆಯ ಒಳಪದರವನ್ನು ಕೆರಳಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್, ಎದೆಯುರಿ ಮತ್ತು ಅಸಿಡಿಟಿ ಸಮಸ್ಯೆ ಕಾಡಬಹುದು.

ಮೆಣಸಿನಕಾಯಿಯಲ್ಲಿರುವ ‘ಕ್ಯಾಪ್ಸೈಸಿನ್’ ಎಂಬ ಅಂಶವು ಕರುಳಿನ ಚಲನೆಯನ್ನು ವೇಗಗೊಳಿಸುತ್ತದೆ, ಇದರಿಂದ ಹೊಟ್ಟೆ ನೋವು ಅಥವಾ ಅತಿಸಾರ ಉಂಟಾಗಬಹುದು.

ಇದನ್ನೂ ಓದಿ:

ಖಾರವೇ ನೇರವಾಗಿ ಅಲ್ಸರ್ ಮಾಡದಿದ್ದರೂ, ಮೊದಲೇ ಅಲ್ಸರ್ ಇರುವವರಿಗೆ ಇದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ.

ರಾತ್ರಿ ಹೊತ್ತು ಅತಿಯಾದ ಖಾರ ತಿಂದರೆ ದೇಹದ ಉಷ್ಣಾಂಶ ಹೆಚ್ಚಾಗಿ ನಿದ್ರೆಗೆ ಅಡ್ಡಿಯಾಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !