ಕರ್ನಾಟಕದಲ್ಲಿಯೂ ಭಾರತದ ಬಹುತೇಕ ಭಾಗಗಳಲ್ಲಿ ಅನ್ನ ಮತ್ತು ತೊಗರಿಬೇಳೆಯ ಅನ್ನ ಸಾರು ಜೀವನಶೈಲಿಯ ಅವಿಭಾಜ್ಯ ಭಾಗವಾಗಿದೆ. ಬಿಸಿ ಬಿಸಿ ಅನ್ನದ ಮೇಲೆ ತೊಗರಿಬೇಳೆ ಸಾರು ಮತ್ತು ತುಪ್ಪ ಹಾಕಿಕೊಂಡು ಊಟ ಮಾಡುವ ಆನಂದಕ್ಕೆ ಸಾಟಿಯೇ ಇಲ್ಲ. ಆದರೂ, ಆಹಾರ ತಜ್ಞರ ಅಭಿಪ್ರಾಯದಲ್ಲಿ ತೊಗರಿಬೇಳೆಯನ್ನು ಹೋಲಿಸಿದರೆ ಕೆಂಪು ಬೇಳೆ ಅಥವಾ ಮಸೂರ್ ಬೇಳೆ ಹೆಚ್ಚು ಪೌಷ್ಠಿಕಾಂಶಗಳನ್ನು ಒಳಗೊಂಡಿದೆ. ಹೀಗಾಗಿ ವಾರದಲ್ಲಿ ಕನಿಷ್ಠ ಎರಡು ದಿನವಾದರೂ ಮಸೂರ್ ಬೇಳೆಯನ್ನು ಆಹಾರದಲ್ಲಿ ಬಳಸುವಂತೆ ಸಲಹೆ ನೀಡುತ್ತಾರೆ.
ಮಸೂರ್ ಬೇಳೆಯ ಪೋಷಕಾಂಶಗಳು:
ಮಸೂರ್ ಬೇಳೆ ಪ್ರೋಟೀನ್ ಮತ್ತು ಫೈಬರ್‌ಗಳಲ್ಲಿ ಸಮೃದ್ಧವಾಗಿದ್ದು, ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ. ಇದು ಸ್ನಾಯುಗಳ ಬೆಳವಣಿಗೆಯಲ್ಲಿಯೂ ಸಹಕಾರಿ. ಪಚನಕ್ರಿಯೆಯನ್ನು ಸುಗಮಗೊಳಿಸುವುದರ ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗಳಿಂದ ದೂರ ಇಡುತ್ತದೆ.

ತೂಕ ನಿಯಂತ್ರಣಕ್ಕೆ ಸಹಾಯಕ:
ಮಸೂರ್ ಬೇಳೆಯಲ್ಲಿ ಕಡಿಮೆ ಕ್ಯಾಲರೀಸ್ ಹಾಗೂ ಹೆಚ್ಚಿನ ಫೈಬರ್ ಇರುವುದರಿಂದ ಇದು ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಕಾಲ ಕಾಪಾಡುತ್ತದೆ. ಇದರಿಂದ ಪದೇ ಪದೇ ಹಸಿವಾಗದೇ, ತೂಕ ನಿಯಂತ್ರಣಕ್ಕೆ ಸಹಕಾರಿ ಆಗುತ್ತದೆ.
ಸಕ್ಕರೆ ಕಾಯಿಲೆ ನಿಯಂತ್ರಣ:
ಈ ಬೇಳೆಯಲ್ಲಿ ಇರುವ ಕೈಬ್ರೋಹೈಡ್ರೇಟ್ಸ್ ನಿಧಾನವಾಗಿ ಜೀರ್ಣವಾಗುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆಯಾಗುವುದಿಲ್ಲ. ಹೀಗಾಗಿ ಮಧುಮೇಹಿಗಳಿಗೂ ಇದು ಸುರಕ್ಷಿತ ಮತ್ತು ಲಾಭಕಾರಿ ಆಹಾರ.

ಹೃದಯ ಆರೋಗ್ಯಕ್ಕೆ ಒಳ್ಳೆಯದು:
ಮಸೂರ್ ಬೇಳೆ ಪೋಟ್ಯಾಶಿಯಂ, ಮ್ಯಾಗ್ನೆಶಿಯಂ ಹಾಗೂ ಫೋಲೇಟ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ. ನಿಯಮಿತವಾಗಿ ಸೇವನೆಯಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದು.
ಅನ್ನ ಮತ್ತು ತೊಗರಿಬೇಳೆ ನಮ್ಮ ಸಂಪ್ರದಾಯದ ಅವಿಭಾಜ್ಯ ಭಾಗವಾಗಿದ್ದರೂ, ಆರೋಗ್ಯದ ದೃಷ್ಟಿಯಿಂದ ಮಸೂರ್ ಬೇಳೆಯನ್ನು ವಾರದಲ್ಲಿ ಕನಿಷ್ಠ ಎರಡು ಬಾರಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಹೆಚ್ಚಿನ ಪೌಷ್ಠಿಕಾಂಶಗಳನ್ನು ಹೊಂದಿರುವ ಈ ಬೇಳೆ ದೇಹದ ಶಕ್ತಿ, ಪಚನ, ತೂಕ ನಿಯಂತ್ರಣ ಮತ್ತು ಹೃದಯ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.