ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯ ಮೈಮುಟ್ಟಿ ಅಪರಿಚಿತ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿರುವಂತಹ ಘಟನೆ ನಡೆದಿದೆ.
ವಿಧಾನಸೌಧ ಮೆಟ್ರೋದಿಂದ ತೆರಳುತ್ತಿದ್ದ ವೇಳೆ ವ್ಯಕ್ತಿಯೋರ್ವ ಅನುಚಿತವಾಗಿ ವರ್ತಿಸಿದ್ದು ಆಗ ಯುವತಿ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದಳು. ಕೂಡಲೇ ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಸಂತ್ರಸ್ತೆ ಯುವತಿ ಮೆಟ್ರೋದಲ್ಲಿ ವಿಧಾನಸೌಧದಿಂದ ಸಂಚರಿಸುತ್ತಿದ್ದ ವೇಳೆ ಅಲ್ಲಿಯೇ ಇದ್ದ ಸುಮಾರು ವ್ಯಕ್ತಿಯೊಬ್ಬ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿದ್ದಾನೆ. ಇಷ್ಟೇ ಅಲ್ಲದೇ ಏನೂ ತಿಳಿದೇ ಇಲ್ಲ ಎನ್ನುವಂತೆ ಆಕೆಯ ಮುಂದೆಯೇ ನಿಂತು ಕೆಟ್ಟದಾಗಿ ನಗುವ ಕೆಲಸ ಮಾಡಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ NCR ದಾಖಲಿಸಿ ವ್ಯಕ್ತಿಗೆ ಎಚ್ಚರಿಕೆ ನೀಡಿ ಪೊಲೀಸರು ಕಳುಹಿಸಿದ್ದಾರೆ. ರೈಲಿನಲ್ಲಿ ನಡೆದ ಘಟನೆಯನ್ನು ಯುವತಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಪ್ರೈವೇಟ್ ಪಾರ್ಟ್ ಮುಟ್ಟಿ ಹಿಂಸೆ ಕೊಟ್ಟ: ಮೆಟ್ರೋ ಕಾಮುಕನ ವಿರುದ್ಧ ಯುವತಿ ದೂರು

