Friday, January 9, 2026

CINE | ಹಾಲಿವುಡ್‌ ಮೀರಿಸುವಂತಿದೆ ʼಟಾಕ್ಸಿಕ್‌ʼ ಟೀಸರ್‌, ಅಂತೂ ಯಶ್‌ ಕ್ಯಾರೆಕ್ಟರ್‌ ರಿವೀಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೋಶಿಯಲ್‌ ಮೀಡಿಯಾದಲ್ಲಿ ಒಂದೊಂದೆ ಕ್ಯಾರೆಕ್ಟರ್‌ ರಿವೀಲ್‌ ಮಾಡಿ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿರುವ ಟಾಕ್ಸಿಕ್‌ ಟೀಂ, ಯಶ್‌ ಬರ್ಥ್‌ಡೇ ದಿನದಂದು ನಟನ ಕ್ಯಾರೆಕ್ಟರ್‌ ರಿವೀಲ್‌ ಮಾಡಿದ್ದಾರೆ.

ಯಶ್ ಬರ್ತ್​ಡೇ (ಜನವರಿ 8) ಪ್ರಯುಕ್ತ ಸರಿಯಾಗಿ 10 ಗಂಟೆ 10 ನಿಮಿಷಕ್ಕೆ ಟೀಸರ್ ಬಿಡುಗಡೆ ಕಂಡಿದೆ. ಸಿನಿಮಾ ಹೇಗಿರಬಹುದು ಎಂಬುದಕ್ಕೆ ಕ್ಲ್ಯಾರಿಟಿ ಸಿಕ್ಕಂತೆ ಆಗಿದೆ. ಯಶ್‌ ಕ್ಯಾರೆಕ್ಟರ್‌ ಹೆಸರು ʼರಾಯʼ, ಟೀಸರ್‌ ಕಡೆಗೆ ಡ್ಯಾಡಿ ಈಸ್‌ ಹೋಮ್‌ ಎಂಬ ಮಾತಷ್ಟೇ ಯಶ್‌ ಬಾಯಿಂದ ಹೊರಬಂದಿದೆ.

‘ಟಾಕ್ಸಿಕ್’ ಸಿನಿಮಾ ತಂಡ ಇತ್ತೀಚೆಗೆ ಯಶ್ ಅವರ ಪೋಸ್ಟರ್ ರಿಲೀಸ್ ಮಾಡಿತು. ಆ ಬಳಿಕ ಸಿನಿಮಾದಲ್ಲಿ ನಟಿಸಿದ ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲಾ ಹೀರೋಯಿನ್​​ಗಳ ಪೋಸ್ಟರ್ ಬಿಡುಗಡೆ ಮಾಡಿತ್ತು. ಈಗ ತಂಡ ಟೀಸರ್ ರಿಲೀಸ್ ಮಾಡಿ ಸಿನಿಮಾದ ಪ್ರಚಾರಕ್ಕೆ ಮುನ್ನುಡಿ ಬರೆದಿದೆ.

ಟೀಸರ್‌ ಹೇಗಿದೆ ನೀವೇ ನೋಡಿ..

error: Content is protected !!