Thursday, September 25, 2025

ಸಾರಿಗೆ ಮುಷ್ಕರ ಸಂಕಷ್ಟ: ಸಿಎಂ ಸಭೆಯಲ್ಲಿ ಏನ್ ತೀರ್ಮಾನ ಆಯ್ತು? ಇಲ್ಲಿದೆ ಡೀಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

38 ತಿಂಗಳ ಅರಿಯರ್ಸ್ ಸಹಿತ ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಬುಧವಾರ ಸಾರಿಗೆ ಮುಷ್ಕರ ನಡೆಸಲು ಮುಂದಾಗಿವೆ. ಒಂದು ಕಡೆ, ಸಾರಿಗೆ ಸಂಘಟನೆಗಳ ಜೊತೆ ಸಿಎಂ ತುರ್ತುಸಭೆ ನಡೆಸಿ ಸಂಧಾನಕ್ಕೆ ಯತ್ನಿಸಿದರೆ, ಇನ್ನೊಂದೆಡೆ ಒಂದು ದಿನದ ಮಟ್ಟಿಗೆ ಬಂದ್ ಮುಂದೂಡಿಕೆಗೆ ಹೈಕೋರ್ಟ್ ಸೂಚಿಸಿದೆ.

ಸಾರಿಗೆ ಸಂಘಟನೆಗಳ ಮುಖಂಡರ ಜೊತೆ ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದು ಮಧ್ಯಾಹ್ನ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. 38 ತಿಂಗಳ ಅರಿಯರ್ಸ್ ಕೊಡಲು ತಾಂತ್ರಿಕ ಅಡ್ಡಿಯಿದೆ. ತಕ್ಷಣಕ್ಕೆ 14 ತಿಂಗಳ ಅರಿಯರ್ಸ್ ಕೊಡುತ್ತೇವೆ. 2023ರಲ್ಲಿ ವೇತನ ಹೆಚ್ಚಳವಾಗಿರುವ ಕಾರಣ ಸಾರಿಗೆ ಕಾಯ್ದೆ ಪ್ರಕಾರ 2027ವರೆಗೆ ವೇತನ ಹೆಚ್ಚಳ ಅಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ