ಚಳಿ ಸಂಪೂರ್ಣವಾಗಿ ಬಿಡುವ ಮೊದಲು, ಬೇಸಿಗೆಯ ಬಿಸಿ ಹೆಚ್ಚಾಗುವ ಮೊದಲೇ ಸಿಗುವ ಆ ಅಪರೂಪದ ತಿಂಗಳು ಫೆಬ್ರುವರಿ. ಪ್ರವಾಸಕ್ಕೆ ಈ ತಿಂಗಳು ಯಾಕೆ ಬೆಸ್ಟ್ ಅಂದ್ರೆ ಹವಾಮಾನ ಹಿತಕರ, ಜನಸಂದಣಿ ಕಡಿಮೆ, ವೆಚ್ಚವೂ ಕೈಗೆಟುಕುವ ಮಟ್ಟದಲ್ಲಿರುತ್ತದೆ. ಇದೇ ಕಾರಣಕ್ಕೆ ಫೆಬ್ರುವರಿ ತಿಂಗಳು ಭಾರತದಲ್ಲಿ ಪ್ರವಾಸಕ್ಕೆ “ಗೋಲ್ಡನ್ ವಿಂಡೋ” ಎಂದು ಹೇಳಲಾಗುತ್ತದೆ. ಪರ್ವತ, ಮರುಭೂಮಿ, ಕರಾವಳಿ ಅಥವಾ ಐತಿಹಾಸಿಕ ತಾಣ—ಯಾವುದೇ ಆಯ್ಕೆ ಮಾಡಿಕೊಂಡರೂ ಈ ತಿಂಗಳು ನಿರಾಸೆ ಮಾಡೋದಿಲ್ಲ.
ಉದಯಪುರ, ರಾಜಸ್ಥಾನ
ಉದಯಪುರದ ಅದ್ಭುತ ಅರಮನೆಗಳು, ಸರೋವರಗಳು ಮತ್ತು ಹಳೆಯ ಬೀದಿಗಳನ್ನು ನೆಮ್ಮದಿಯಾಗಿ ಸುತ್ತಾಡಲು ಅನುಕೂಲ ಮಾಡಿಕೊಡುತ್ತವೆ. ಪಿಚೋಲಾ ಸರೋವರದ ದೋಣಿ ವಿಹಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಮಯದಲ್ಲಿ ಹೆಚ್ಚು ಆನಂದಕರ.

ವಾರಣಾಸಿ, ಉತ್ತರ ಪ್ರದೇಶ
ಮಂಜು ಕಡಿಮೆಯಾಗುವ ಮತ್ತು ಬಿಸಿಲು ಇನ್ನೂ ಕಾಡದ ಈ ತಿಂಗಳಲ್ಲಿ ವಾರಣಾಸಿ ಶಾಂತವಾಗಿರುತ್ತದೆ. ಬೆಳಗಿನ ಗಂಗಾ ದೋಣಿ ವಿಹಾರ ಹಾಗೂ ಸಂಜೆ ಆರತಿ ಅನುಭವಕ್ಕೆ ಇದು ಸೂಕ್ತ ಕಾಲ.

ಗುಲ್ಮಾರ್ಗ್, ಜಮ್ಮು ಮತ್ತು ಕಾಶ್ಮೀರ
ಚಳಿಗಾಲದ ಸೊಬಗು ತನ್ನ ಶಿಖರ ತಲುಪುವ ಸಮಯ. ಹಿಮಪಾತ, ಸ್ಕೀಯಿಂಗ್, ಸ್ನೋಬೋರ್ಡಿಂಗ್ ಮತ್ತು ಗೊಂಡೊಲಾ ಸವಾರಿ—all-in-one ಅನುಭವ.

ಹಂಪಿ, ಕರ್ನಾಟಕ
ಫೆಬ್ರವರಿಯ ಹವಾಮಾನ ಹಂಪಿಯ ದೇವಾಲಯಗಳು ಮತ್ತು ನದಿ ದಂಡೆಗಳನ್ನು ಆಯಾಸವಿಲ್ಲದೆ ಅನ್ವೇಷಿಸಲು ಸಹಕಾರಿಯಾಗಿದೆ. ಸೈಕ್ಲಿಂಗ್ ಮತ್ತು ಸೂರ್ಯಾಸ್ತ ವೀಕ್ಷಣೆಗೆ ಇದು ಅತ್ಯುತ್ತಮ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಸ್ಪಷ್ಟ ಆಕಾಶ, ಶಾಂತ ಕಡಲತೀರಗಳು ಮತ್ತು ನೀರಿನ ಆಟಕ್ಕೆ ಪರ್ಫೆಕ್ಟ್ ಸಮಯ. ಸ್ನಾರ್ಕೆಲಿಂಗ್ ಮತ್ತು ಸ್ಕೂಬಾ ಡೈವಿಂಗ್ ಈ ತಿಂಗಳಲ್ಲಿ ಸುಲಭ.

ಕಚ್‌ನ ರಣ್, ಗುಜರಾತ್
ರಣ್ ಉತ್ಸವದ ಕೊನೆಯ ತಿಂಗಳು, ಬಿಳಿ ಮರುಭೂಮಿಯ ಸೌಂದರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮರುಭೂಮಿ ಸಫಾರಿಗಳು ಫೆಬ್ರವರಿಯಲ್ಲಿ ವಿಶೇಷ ಆಕರ್ಷಣೆ.

ಒಟ್ಟಾರೆ, ಆರಾಮ, ಶಾಂತಿ ಮತ್ತು ಅಚ್ಚಳಿಯದೆ ಉಳಿಯುವ ಅನುಭವಗಳನ್ನು ಬಯಸುವವರಿಗೆ ಫೆಬ್ರುವರಿ ತಿಂಗಳು ಪ್ರವಾಸಕ್ಕೆ ಅತ್ಯುತ್ತಮ.


