ಇತ್ತೀಚಿನ ದಿನಗಳಲ್ಲಿ ಭಾರತೀಯರಿಗೆ ವಿದೇಶ ಪ್ರವಾಸವು ಕಡಿಮೆ ವೆಚ್ಚದಲ್ಲಿ ಸಾಧ್ಯವಾಗುತ್ತಿದೆ. ಅನೇಕ ದೇಶಗಳು ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ನೀಡುತ್ತಿರುವುದರಿಂದ ಪ್ರವಾಸಿಗರು ಸುಲಭವಾಗಿ ವಿದೇಶಕ್ಕೆ ತೆರಳಿ ರಜೆಗಳನ್ನು ಆನಂದಿಸುತ್ತಿದ್ದಾರೆ. ಅಗ್ಗದ ಪ್ಯಾಕೇಜ್‌ಗಳೊಂದಿಗೆ ಕುಟುಂಬ, ಸ್ನೇಹಿತರ ಜೊತೆ ಪ್ರವಾಸ ಕೈಗೊಳ್ಳಲು ಸೂಕ್ತ ಅವಕಾಶಗಳಿವೆ.
ವಿಯೆಟ್ನಾಂ ಪ್ರವಾಸ
ವಿಯೆಟ್ನಾಂ ಭಾರತೀಯರಿಗೆ ಅಗ್ಗದ ವಿದೇಶ ಪ್ರವಾಸಿ ತಾಣವಾಗಿದೆ. ಹನೋಯ್ ನಗರದ ಸಾಂಸ್ಕೃತಿಕ ಸೊಗಡು, ಹ್ಯಾಲಾಂಗ್ ಕೊಲ್ಲಿಯಲ್ಲಿ ಕ್ರೂಸ್ ಸವಾರಿ ಮತ್ತು ಸ್ಥಳೀಯ ಸಂಸ್ಕೃತಿ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ಯಾಕೇಜ್ ವೆಚ್ಚ: ಪ್ರತಿ ವ್ಯಕ್ತಿಗೆ 60,888 ರಿಂದ 1,08,800.

ಬಾಲಿ ಪ್ರವಾಸ
ಇಂಡೋನೇಷ್ಯಾದ ಬಾಲಿ ಹನಿಮೂನ್ ಜೋಡಿಗಳ ನೆಚ್ಚಿನ ತಾಣ. ಸಮುದ್ರತೀರ, ದೇವಾಲಯಗಳು ಮತ್ತು ಉಬುಡ್‌ನ ಜಲಪಾತಗಳು ವಿಶೇಷ ಆಕರ್ಷಣೆ. ಪ್ಯಾಕೇಜ್ ವೆಚ್ಚ: 85,000 ರಿಂದ 1,00,000.

ಹಾಂಗ್ ಕಾಂಗ್ ಡಿಸ್ನಿಲ್ಯಾಂಡ್
ಮಕ್ಕಳು ಮತ್ತು ಕುಟುಂಬಕ್ಕೆ ಸೂಕ್ತವಾದ ಹಾಂಗ್ ಕಾಂಗ್ ಡಿಸ್ನಿಲ್ಯಾಂಡ್ ಪ್ರವಾಸದಲ್ಲಿ ಪಾರ್ಕ್ ಎಂಟ್ರಿ, ಹೋಟೆಲ್, ಆಹಾರ ಮತ್ತು ಸ್ಥಳೀಯ ಸಾರಿಗೆ ಸೇರಿವೆ. ವೆಚ್ಚ: 60,000 ರಿಂದ 1,50,000.

ಥೈಲ್ಯಾಂಡ್ ಪ್ರವಾಸ
ಬ್ಯಾಂಕಾಕ್, ಫುಕೆಟ್ ಕಡಲತೀರಗಳು, ಚಿಯಾಂಗ್ ಮಾಯ್ ದೇವಾಲಯಗಳು ಮತ್ತು ವಿಶಿಷ್ಟ ಥಾಯ್ ಆಹಾರ ಥೈಲ್ಯಾಂಡ್ ಪ್ರವಾಸದ ಆಕರ್ಷಣೆ. ವೆಚ್ಚ: 70,000 ರಿಂದ 1,31,874.

ಭೂತಾನ್ ಪ್ರವಾಸ
ಶಾಂತಿ ಮತ್ತು ಪ್ರಕೃತಿ ಪ್ರೇಮಿಗಳಿಗೆ ಭೂತಾನ್ ಸೂಕ್ತ ತಾಣ. ಟೈಗರ್ಸ್ ನೆಸ್ಟ್, ಪುನಾಖಾ ಕಣಿವೆ ಹಾಗೂ ಥಿಂಪುವಿನ ನೈಟ್‌ಲೈಫ್ ಅನುಭವಿಸಬಹುದು. ಪ್ಯಾಕೇಜ್ ವೆಚ್ಚ: 59,844 ರಿಂದ 75,000.
