ಈ ವರ್ಷ ಮುಗೀತಿದೆ ಇನ್ನು ಒಂದೇ ತಿಂಗಳು ಬಾಕಿ ಇದೆ. ಅದ್ರಲ್ಲೂ ನಿಮಗೆ ವಿದೇಶ ಟ್ರಿಪ್ ಮಾಡಿ ಬರಬಹುದು. ನೀವು ಮನಸ್ಸು ಮಾಡ್ಬೇಕಷ್ಟೆ. ನಾವು ಹೋಗೋ ದೇಶದ ಸಂಸ್ಕೃತಿ, ಪ್ರಕೃತಿ, ಆಹಾರ ಮತ್ತು ಅನುಭವ ಇವೆಲ್ಲವನ್ನು ಒಂದೇ ಪ್ರಯಾಣದಲ್ಲಿ ನೋಡಬೇಕಂತಿದ್ರೆ ಕೆಲವು ದೇಶಗಳು ಟ್ರಾವೆಲ್ ಲವರ್ಸ್‌ಗಾಗಿ ಪರ್ಫೆಕ್ಟ್ ಆಗಿವೆ.
- ಜಪಾನ್: ಚೆರ್ರಿ ಬ್ಲಾಸಮ್ ಹೂವುಗಳು, ಟೋಕಿಯೋನ ಆಧುನಿಕ ನಗರ ಸಂಸ್ಕೃತಿ, ಕಿಯೋಟೋ ದೇವಾಲಯಗಳು ಪ್ರಾಚೀನತೆಯೂ ಹಾಗೂ ನವೀನತೆಯೂ ಒಂದೇ ಜಾಗದಲ್ಲಿ ಸಿಗುತ್ತವೆ.
- ಇಟಲಿ: ರೋಮ್‌ನ ಐತಿಹಾಸಿಕ ಕಥೆಗಳು, ವೆನಿಸ್‌ನ ರೋಮಾನ್ಟಿಕ್ ಕಾಲುವೆಗಳು, ಪಿಜ್ಜಾ–ಪಾಸ್ಟಾ ರುಚಿಗಳುಆಹಾರ ಮತ್ತು ಇತಿಹಾಸ ಪ್ರಿಯರಿಗೆ ಸ್ವರ್ಗ.
- ನ್ಯೂಜಿಲ್ಯಾಂಡ್: ಹಸಿರು ಬೆಟ್ಟಗಳು, ಬ್ಲೂ ಲೇಕ್‌ಗಳು, ಬಂಜೀ ಜಂಪಿಂಗ್, ಸ್ಕೈಡೈವಿಂಗ್ all adventure at one place. ನೈಸರ್ಗಿಕ ಸೌಂದರ್ಯ ಇಲ್ಲಿ ಅಪ್ರತಿಮ.
- ಥೈಲ್ಯಾಂಡ್: ಬ್ಯಾಂಕಾಕ್ ಶಾಪಿಂಗ್, ಫುಕೆಟ್ ಮತ್ತು ಕ್ರಾಬಿ ಸಮುದ್ರ ತೀರಗಳು, ರುಚಿಕರ ಸ್ಟ್ರೀಟ್ ಫುಡ್ ಕಡಿಮೆ ಖರ್ಚಿನಲ್ಲಿ ಲಕ್ಸುರಿ ಅನುಭವ ಪಡೆಯೋಕೆ ಈ ಬೆಸ್ಟ್.
- ಕೆನಡಾ: ನಯಾಗ್ರಾ ಜಲಪಾತ, ವಿಶಾಲ ಅರಣ್ಯ ಪ್ರದೇಶಗಳು, ಅದ್ಭುತ ನಗರಗಳು ಪ್ರಕೃತಿ ಪ್ರಿಯರು ಮತ್ತು ಶಾಂತಿ ಹುಡುಕುವವರಿಗೆ ಅತ್ಯುತ್ತಮ ಗಮ್ಯಸ್ಥಾನ.

