January17, 2026
Saturday, January 17, 2026
spot_img

Travel | Budget Friendlyಯಾಗಿ ವಿಯೆಟ್ನಾಂಗೆ ಈ ರೀತಿ ಪ್ರವಾಸ ಮಾಡಿ.!

ವಿದೇಶಿ ಪ್ರವಾಸ ಮಾಡಲು ಇಚ್ಛಿಸುವವರು ಹೆಚ್ಚಿನ ವೆಚ್ಚದ ಕಾರಣದಿಂದ ಹಿಂದೆ ಸರಿಯುವ ಸಂದರ್ಭಗಳು ಸಾಮಾನ್ಯ. ಆದರೆ ಭಾರತೀಯರಿಗೆ ವಿಯೆಟ್ನಾಂ (Vietnam) ಅತ್ಯಂತ ಕೈಗೆಟುಕುವ ದರದಲ್ಲಿ ವಿದೇಶಿ ಪ್ರವಾಸ ನೀಡುವ ದೇಶಗಳಲ್ಲಿ ಒಂದಾಗಿದೆ. ವೈವಿಧ್ಯಮಯ ಸಂಸ್ಕೃತಿ, ನೈಸರ್ಗಿಕ ಸೌಂದರ್ಯ ಮತ್ತು ಬೀದಿ ಆಹಾರಗಳೊಂದಿಗೆ ಈ ದೇಶ ಪ್ರವಾಸಿಗರಿಗೆ ಅನನ್ಯ ಅನುಭವವನ್ನು ನೀಡುತ್ತದೆ.

ವಿಮಾನ ಮತ್ತು ವೀಸಾ ವೆಚ್ಚ ಕಡಿಮೆ
ವಿದೇಶ ಪ್ರವಾಸದಲ್ಲಿ ಅತಿ ಹೆಚ್ಚು ಖರ್ಚಾಗುವುದು ವಿಮಾನ ಪ್ರಯಾಣಕ್ಕೆ. ಆದರೆ ವಿಯೆಟ್ನಾಂಗೆ ಭಾರತದಿಂದ ತೆರಳುವ ವಿಮಾನ ದರಗಳು ಹೋಲಿಸಿದರೆ ಕಡಿಮೆಯಾಗಿದೆ. ರೌಂಡ್‌ ಟ್ರಿಪ್‌ಗೆ ಸಾಮಾನ್ಯವಾಗಿ ರೂ.18,000 ರಿಂದ ರೂ.22,000 ಒಳಗೆ ದೊರೆಯುತ್ತದೆ. ಮುಂಚಿತವಾಗಿ ಟಿಕೆಟ್‌ ಬುಕ್ ಮಾಡಿದರೆ ಇನ್ನಷ್ಟು ಕಡಿಮೆ ದರದಲ್ಲಿ ಪ್ರಯಾಣ ಸಾಧ್ಯ. ಜೊತೆಗೆ ಭಾರತೀಯರಿಗೆ ಇ-ವೀಸಾ ಕಡ್ಡಾಯವಾಗಿದ್ದು, ಇದರ ವೆಚ್ಚ ಸುಮಾರು ರೂ.2,000.

ಪ್ರವಾಸ ಮಾಡಲು ಉತ್ತಮ ನಗರಗಳು
ಪ್ರವಾಸಿಗರು ಉತ್ತರ ವಿಯೆಟ್ನಾಂನ ಹನೋಯಿ (Hanoi) ಮತ್ತು ಹಾ ಲಾಂಗ್ ಬೇ (Ha Long Bay) ಅಥವಾ ದಕ್ಷಿಣ ಭಾಗದ ಹೋ ಚಿ ಮಿನ್ಹ್ ಸಿಟಿ (Ho Chi Minh City) ಮತ್ತು ಮೆಕಾಂಗ್ ಡೆಲ್ಟಾ (Mekong Delta) ಪ್ರದೇಶಗಳನ್ನು ಭೇಟಿ ನೀಡಬಹುದು. ಇವುಗಳು ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವಗಳಿಂದ ಸಮೃದ್ಧವಾಗಿವೆ.

ಬಜೆಟ್ ವಸತಿ ಮತ್ತು ಆಹಾರ
ವಿಯೆಟ್ನಾಂನಲ್ಲಿ ಹಾಸ್ಟೆಲ್, ಅತಿಥಿಗೃಹ ಹಾಗೂ ಬಜೆಟ್ ಹೋಟೆಲ್‌ಗಳು ಸುಲಭವಾಗಿ ಲಭ್ಯ. ಪ್ರತಿದಿನದ ವಸತಿ ವೆಚ್ಚ ರೂ.700ರಿಂದ ಪ್ರಾರಂಭವಾಗುತ್ತದೆ. ಆಹಾರ ಪ್ರಿಯರಿಗೆ ಬೀದಿ ಆಹಾರ ಬಹಳ ಅಗ್ಗದ ಬೆಲೆಯಲ್ಲಿ ಲಭ್ಯವಿದ್ದು, ಒಂದು ಊಟಕ್ಕೆ ಕೇವಲ ರೂ.100 ರಿಂದ ರೂ.200 ಮಾತ್ರ ವೆಚ್ಚವಾಗುತ್ತದೆ.

ಸ್ಥಳೀಯ ಸಾರಿಗೆಗೆ ಆದ್ಯತೆ
ಪ್ರವಾಸದಲ್ಲಿ ಹೆಚ್ಚು ಹಣ ಉಳಿಸಬೇಕಾದರೆ ಸ್ಥಳೀಯ ಸಾರಿಗೆಯನ್ನು ಬಳಸುವುದು ಉತ್ತಮ. ಸರ್ಕಾರಿ ಬಸ್‌ಗಳು ಹಾಗೂ ಸಾರ್ವಜನಿಕ ಸಾರಿಗೆಗಳನ್ನು ಬಳಸಿದರೆ ರೂ.80ರಿಂದ ರೂ.150 ಒಳಗೆ ಸಂಚಾರ ಮಾಡಬಹುದು. ಇದು ಪ್ರವಾಸಿಗರಿಗೆ ಹೆಚ್ಚಿನ ವೆಚ್ಚದ ಉಳಿತಾಯಕ್ಕೆ ಸಹಾಯಕ.

ಪ್ರಮುಖ ಪ್ರವಾಸಿ ತಾಣಗಳು
ಹಾ ಲಾಂಗ್ ಬೇ, ಹನೋಯಿ, ಹೋಯಿ ಆನ್, ಹೋ ಚಿ ಮಿನ್ಹ್ ಸಿಟಿ, ಡಾ ನಾಂಗ್ ಮತ್ತು ಮೆಕಾಂಗ್ ಡೆಲ್ಟಾ ವಿಯೆಟ್ನಾಂನ ಪ್ರಮುಖ ಪ್ರವಾಸಿ ತಾಣಗಳಾಗಿವೆ.

Must Read

error: Content is protected !!