March 27, 2026
Friday, March 27, 2026
spot_img

ಬುಲೆಟ್‌ನಲ್ಲಿ ಸ್ಪೀಡಾಗಿ ತ್ರಿಬಲ್‌ ರೈಡಿಂಗ್‌ : ಭೀಕರ ಅಪಘಾತದಲ್ಲಿ ಇಬ್ಬರ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನ ಉನ್ನಿಕೃಷ್ಣನ್‌ ಜಂಕ್ಷನ್‌ ಬಳಿ ತ್ರಿಬಲ್‌ ರೈಡಿಂಗ್‌ ಹೋಗುತ್ತಿದ್ದ ಬೈಕ್‌ ಭೀಕರ ಅಪಘಾತಕ್ಕೀಡಾಗಿದೆ.

ಬೈಕ್‌ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದ್ದು, ಕಿರಣ್ (25) ಮತ್ತು ಯಶವಂತ್ (25) ಮೃತಪಟ್ಟಿದ್ದಾರೆ. ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಗೌತಮ್‌ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಡರಾತ್ರಿ ಈ ಅಪಘಾತ ಸಂಭವಿಸಿದೆ, ರಸ್ತೆಖಾಲಿ ಇರುವ ಕಾರಣ ಹೆಲ್ಮೆಟ್‌ ಧರಿಸದ ಹುಡುಗರು ಸ್ಪೀಡ್‌ ಆಗಿ ಬುಲೆಟ್‌ ಓಡಿಸಿಕೊಂಡು ಹೋಗುತ್ತಿದ್ದರು. ಮರಕ್ಕೆ ಡಿಕ್ಕಿಯಾದ ಬಸ್‌ ಪಲ್ಟಿಯಾಗಿ ಬಿದ್ದಿದೆ. ಸ್ಥಳದಲ್ಲೇ ಬೈಕ್‌ ಓಡಿಸುತ್ತಿದ್ದ ಕಿರಣ್‌ ಹೆಣವಾಗಿದ್ದಾರೆ. ಯಶವಂತ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !