ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಟ್ರಕ್ ಚಲಾಯಿಸಿದ ಪರಿಣಾಮ ಹಲವು ವಾಹನಗಳ ಮೇಲೆ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ವಿದ್ಯಾ ಪ್ಯಾಲೇಸ್‌ನಿಂದ ಬರುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಸುಮಾರು 1.5 ಕಿ.ಮೀಗಳಷ್ಟು ದೂರ ಎದುರಿದ್ದ ಎಲ್ಲಾ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಹೋಗಿದೆ. ಟ್ರಕ್ ಮೊದಲು ಬೈಕ್ಗೆ ಡಿಕ್ಕಿ ಹೊಡೆದಿದೆ.ನಂತರವೂ ಟ್ರಕ್ ಮುಂದೆ ಚಲಿಸುತ್ತಲೇ ಇತ್ತು.
ಕಾರುಗಳು, ಇ-ರಿಕ್ಷಾಗಳು, ಆಟೋರಿಕ್ಷಾಗಳು ಮತ್ತು ಪಾದಚಾರಿಗಳಿಗೂ ಡಿಕ್ಕಿ ಹೊಡೆದಿದೆ. ಜನರು ಕಿರುಚುತ್ತಾ ಓಡುತ್ತಿದ್ದರು, ಆದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ನಜ್ಜುಗುಜ್ಜಾದ ಬೈಕಿಗೆ ಬೆಂಕಿ ಹೊತ್ತಿಕೊಂಡಿತು ಜ್ವಾಲೆಗಳು ಟ್ರಕ್‌ನ ಮುಂಭಾಗವನ್ನು ಆವರಿಸಿದ ಪರಿಣಾಮ ಮಧ್ಯೆ ಸಿಲುಕಿದ ಬೈಕ್ ಸವಾರ ಸಾವನ್ನಪ್ಪಿದ್ದಾರೆ.
ಕುಡಿದ ಮತ್ತಲ್ಲಿ ಗಾಡಿ ಓಡಿಸಿ ಇಬ್ಬರನ್ನು ಕೊಂದ ಟ್ರಕ್ ಡ್ರೈವರ್
