ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ನಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಕದನ ವಿರಾಮ ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ಒಪ್ಪಂದವನ್ನು ಆಚರಿಸಲು ಇಸ್ರೇಲ್ ಗೆ ಆಗಮಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಇಸ್ರೇಲ್ ಪ್ರಧಾನಿ ನೇತನ್ಯಾಹು, ‘ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಇಸ್ರೇಲ್ನ ಇದುವರೆಗೆ ಸಿಕ್ಕಿರುವ ಅತ್ಯುತ್ತಮ ಸ್ನೇಹಿತನಾಗಿದ್ದಾರೆ. ಯಾವುದೇ ಅಮೇರಿಕನ್ ಅಧ್ಯಕ್ಷರು ಇಸ್ರೇಲ್‌ಗಾಗಿ ಈವರೆಗೂ ಮಾಡಲಾಗದ್ದನ್ನು ಟ್ರಂಪ್ ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ.
ಈ ವೇಳೆ ಇಸ್ರೇಲ್ ಸೈನಿಕರ ಹೋರಾಟವನ್ನು ಶ್ಲಾಘಿಸಿದ ನೆತನ್ಯಾಹು, ‘ಯುದ್ದದಲ್ಲಿ ವೀರವೇಷದಿಂದ ಹೋರಾಡಿದ ಇಸ್ರೇಲ್ ಸೈನಿಕರ ಸಾಹಸ ಶ್ಲಾಘನೀಯ. ನಮ್ಮ ರಾಷ್ಟ್ರವು ಹಮಾಸ್ ವಿರುದ್ಧ ಅದ್ಭುತ ವಿಜಯಗಳನ್ನು ಸಾಧಿಸಿದೆ. ಶಾಂತಿಗೆ ತಮ್ಮ ಬದ್ಧತೆ ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದರು.
ಇಸ್ರೇಲ್ ಭೇಟಿ ಕೈಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಸಂಸತ್ ಗೆ ಭೇಟಿ ನೀಡಿದರು. ಈ ವೇಳೆ ಇಸ್ರೇಲ್ ಎಲ್ಲ ಜನಪ್ರತಿನಿಧಿಗಳು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಅಭೂತಪೂರ್ವ ಸ್ವಾಗತ ಕೋರಿದರು. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ರಂಪ್ ಅವರನ್ನು ಸ್ವಾಗತಿಸಿದರು.

