ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ನಡುವೆ ಇರಾನ್ ಹಾಗೂ ಅಮೆರಿಕ ಕದನ ವಿರಾಮದ ಕುರಿತು ಮಾತುಕತೆ ನಡೆಸುತ್ತಿದ್ದೆ ಎಂಬ ವರದಿಗಳು ಹರಡುತ್ತಿದ್ದು, ಇದರ ನಡುವೆ ಡೊನಾಲ್ಡ್ ಟ್ರಂಪ್ ಮಾಡಿದ ಪೋಸ್ಟ್ ಹೊಸ ಚರ್ಚೆಗೆ ಗ್ರಾಸವಾಗಿದೆ.
ಎರಡು ಮೂರು ವಾರಗಳಲ್ಲಿ ಯುದ್ಧ ಕೊನೆಯಾಗಲಿದೆ ಎಂದು ಹೇಳುತ್ತಿದ್ದ ಟ್ರಂಪ್ ಇದೀಗ, .ಇರಾನ್ ಕದನ ವಿರಾಮಕ್ಕೆ ಸಿದ್ಧವಾಗಿದೆ ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ತಮ್ಮ ‘ಟ್ರುತ್ ಸೋಶಿಯಲ್’ಖಾತೆಯಲ್ಲಿ ಮಾಡಿರುವ ಪೋಸ್ಟ್ನಲ್ಲಿ ಟ್ರಂಪ್ , ಇರಾನ್ನ ನೂತನ ಅಧ್ಯಕ್ಷರು ಕದನ ವಿರಾಮಕ್ಕಾಗಿ ಯಾಚಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇರಾನ್ ನ ನೂತನ ಅಧ್ಯಕ್ಷರು ಹೆಚ್ಚು ಬುದ್ಧಿವಂತರು. ಹಿಂದಿನ ಅವರಂತೆ ಹಠಮಾರಿ ಅಲ್ಲ. ಅವರು ಕದನ ವಿರಾಮಕ್ಕೆ ಬಯಸುತ್ತಿದ್ದು, ಅದಕ್ಕೆ ಹಾರ್ಮುಜ್ ಜಲಸಂಧಿ ಮುಕ್ತಗೊಂಡರೆ ಮಾತ್ರ ಅವಕಾಶ. ಇರಾನ್ ಜಲಸಂಧಿ ಮುಕ್ತಗೊಳಿಸಿ, ಹಡಗುಗಳ ಸಂಚಾರಕ್ಕೆ ಅವಕಾಶಕೊಟ್ಟರೆ ಕದನ ವಿರಾಮದ ಒಪ್ಪಂದ ಸಾಧ್ಯ. ಇಲ್ಲವಾದಲ್ಲಿ ನಾವು ಇರಾನ್ ಮೇಲೆ ಬಾಂಬ್ ದಾಳಿಗಳನ್ನು ಮುಂದುವರಿಸುತ್ತೇವೆ ಎಂದು ಟ್ರಂಪ್ ಗುಡುಗಿದ್ದಾರೆ.



