January18, 2026
Sunday, January 18, 2026
spot_img

FOOD | ಆರೋಗ್ಯಕರ ಸಬ್ಬಕ್ಕಿ ಕಿಚಡಿ ಒಮ್ಮೆ ಟ್ರೈ ಮಾಡಿ! ರೆಸಿಪಿ ಇಲ್ಲಿದೆ

ಸಬ್ಬಕ್ಕಿ ಅಥವಾ ಸಾಬುದಾನ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಇದರಲ್ಲಿ ಫೈಬರ್‌ ಅಂಶ ಹೆಚ್ಚಾಗಿ ಇರುವುದರಿಂದ ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ. ಜೊತೆಗೆ ದೇಹಕ್ಕೆ ಶಕ್ತಿಯನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. ಉಪವಾಸ ಸಮಯದಲ್ಲಷ್ಟೇ ಅಲ್ಲದೆ, ಸಾಮಾನ್ಯ ದಿನಗಳಲ್ಲಿ ಸಹ ಇದನ್ನು ಆಹಾರಕ್ರಮದಲ್ಲಿ ಸೇರಿಸಬಹುದು.

ಬೇಕಾಗುವ ಸಾಮಗ್ರಿಗಳು

ಸಬ್ಬಕ್ಕಿ – 1 ಕಪ್
ಜೀರಿಗೆ – 1 ಚಮಚ
ಹೆಚ್ಚಿದ ಹಸಿರು ಮೆಣಸಿನಕಾಯಿ – 1
ಹೆಚ್ಚಿದ ಟೊಮೆಟೊ – 1
ಹೆಚ್ಚಿದ ಈರುಳ್ಳಿ – 1
ಎಣ್ಣೆ – 2 ಚಮಚ
ಶೇಂಗಾ – 1 ಚಮಚ
ಹೆಚ್ಚಿದ ಆಲೂಗೆಡ್ಡೆ – 1
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಚಮಚ

ಮಾಡುವ ವಿಧಾನ

ಮೊದಲಿಗೆ ಸಬ್ಬಕ್ಕಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರು ಸೇರಿಸಿ ಸುಮಾರು 30 ನಿಮಿಷ ನೆನೆಸಿಡಿ.

ಈಗ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕಾದ ಬಳಿಕ ಜೀರಿಗೆ, ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಆಲೂಗೆಡ್ಡೆ ಮತ್ತು ಶೇಂಗಾ ಹಾಕಿ ಹುರಿಯಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಬಳಿಕ ನೆನೆಸಿಟ್ಟ ಸಬ್ಬಕ್ಕಿಯನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೊಮ್ಮೆ ತಿರುವಿ ಬಿಸಿ ಬಿಸಿ ಕಿಚಡಿಯನ್ನು ಸರ್ವ್ ಮಾಡಿ.

Must Read

error: Content is protected !!