ಸಮೋಸ ಅಂದ್ರೆನೇ ಬಾಯಲ್ಲಿ ನೀರು ಬರಿಸುವ ತಿನಿಸು. ಸಾಮಾನ್ಯವಾಗಿ ಆಲೂಗಡ್ಡೆ, ಬಟಾಣಿ ಹೂರಣದಿಂದ ತಯಾರಿಸುವ ಸಮೋಸ ಎಲ್ಲರಿಗೂ ಪರಿಚಿತ. ಆದರೆ ಸಮೋಸಕ್ಕೆ ಕಾರ್ನ್ ಮತ್ತು ಚೀಸ್ ಸೇರಿಸಿದರೆ ಅದು ಇನ್ನೂ ರುಚಿ ಹೆಚ್ಚಿಸುತ್ತದೆ. ಕಾಫಿ ಅಥವಾ ಚಹಾದ ಜೊತೆ ಸಾಯಂಕಾಲದ ತಿಂಡಿಗೆ ಸೂಕ್ತವಾದ ಕಾರ್ನ್ ಚೀಸ್ ಸಮೋಸ ಮನೆಯಲ್ಲೇ ಸುಲಭವಾಗಿ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು – 1 ಕಪ್
ಎಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ಸ್ವಲ್ಪ
ನೀರು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಕರಿಯಲು
ಹೂರಣಕ್ಕೆ:
ಸ್ವೀಟ್ ಕಾರ್ನ್ – 1 ಕಪ್
ಚೀಸ್ – ½ ಕಪ್
ಕ್ಯಾಪ್ಸಿಕಂ (ಸಣ್ಣ ತುಂಡುಗಳು) – ¼ ಕಪ್
ಹಸಿಮೆಣಸು – 2 (ಸಣ್ಣದಾಗಿ ಕತ್ತರಿಸಿದವು)
ಗರಂ ಮಸಾಲ – ½ ಟೀ ಸ್ಪೂನ್
ಮೆಣಸಿನ ಪುಡಿ – ½ ಟೀ ಸ್ಪೂನ್
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ತಯಾರಿಸುವ ವಿಧಾನ:
ಮೊದಲು ಮೈದಾ ಹಿಟ್ಟು, ಉಪ್ಪು ಮತ್ತು ಎಣ್ಣೆ ಸೇರಿಸಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಹಿಟ್ಟು ಕಲಸಿ, 20 ನಿಮಿಷ ಮುಚ್ಚಿ ಇಡಿ.
ಹೂರಣ ಮಾಡಲು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸು, ಕ್ಯಾಪ್ಸಿಕಂ ಹಾಕಿ ಹುರಿಯಿರಿ. ನಂತರ ಬೇಯಿಸಿದ ಕಾರ್ನ್, ಗರಂ ಮಸಾಲ, ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಚೀಸ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ ಹೂರಣ ತಯಾರಿಸಿ.
ಈಗ ಹಿಟ್ಟಿನ ಮುದ್ದೆಯನ್ನು ಸಣ್ಣ ಉಂಡೆಗಳಾಗಿ ಮಾಡಿ, ಚಪಾತಿಯಂತೆ ಲಟ್ಟಿಸಿ ಅರ್ಧ ಚಂದ್ರಾಕಾರದಂತೆ ಕತ್ತರಿಸಿ. ಅದನ್ನು ಕೋನ್ ಆಕಾರಕ್ಕೆ ತಂದು ಹೂರಣ ತುಂಬಿ, ಅಂಚುಗಳನ್ನು ನೀರಿನಿಂದ ಅಂಟಿಸಿ ಮುಚ್ಚಿ. ಬಿಸಿ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಸಮೋಸಗಳನ್ನು ಕರಿಯಿರಿ.