Monday, January 12, 2026

ಗರ್ಭಿಣಿಯ ಅನಿರೀಕ್ಷಿತ ಸಾವಿಗೆ ಟ್ವಿಸ್ಟ್: ಕೊನೆಗೂ ಬಯಲಾಯ್ತು ಅಸಲಿ ಸತ್ಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಧರ್ಮಪುರಿ ಬಳಿ ಗರ್ಭಿಣಿಯೊಬ್ಬರು ಮನೆಯ ಮೆಟ್ಟಿಲುಗಳಿಂದ ಬಿದ್ದು ದುರಂತ ಸಾವನ್ನಪ್ಪಿದ್ದರು. ಅವರ ಕುಟುಂಬ ಮತ್ತು ಸಂಬಂಧಿಕರು ಆಕೆಯ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಿ ಸಮಾಧಿ ಮಾಡಿದ್ದರು.

ಈ ಮಧ್ಯೆ, ಮೃತ ಮಹಿಳೆಯ ಪತಿಯ ಕೃತ್ಯದ ಬಗ್ಗೆ ಆ ಮಹಿಳೆಯ ಕುಟುಂಬಕ್ಕೆ ಇದ್ದಕ್ಕಿದ್ದಂತೆ ಅನುಮಾನ ಬಂದಿತ್ತು. ಆದರೆ ಪತಿ ಸರಿಯಾಗಿ ಉತ್ತರ ನೀಡಲಿಲ್ಲ. ಬಳಿಕ ಪೊಲೀಸರು ನಡೆಸಿದ ತನಿಖೆಯ ಸಮಯದಲ್ಲಿ ವಿವಿಧ ಆಘಾತಕಾರಿ ವಿವರಗಳು ಬೆಳಕಿಗೆ ಬಂದಿವೆ. ಆಕೆ ಸಾವನ್ನಪ್ಪಿ 10 ದಿನಗಳ ಬಳಿಕ ಈ ವಿಷಯ ಬಯಲಾಗಿದೆ.ಈ ಘಟನೆಯಲ್ಲಿ ಮೂವರನ್ನು ಬಂಧಿಸಲಾಗಿದೆ.

ಎರಿಯೂರು ಬಳಿಯ ಪೂಚೂರಿನ 26 ವರ್ಷದ ಕೆ. ರಮ್ಯಾ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದು, ಇತ್ತೀಚೆಗೆ ಮತ್ತೆ ಗರ್ಭಿಣಿಯಾಗಿದ್ದರು.

ಡಿಸೆಂಬರ್ 1ರಂದು ಆಕೆ ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅವರ ಪತಿ ಕಣ್ಣನ್ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದರು. ಆದರೆ, ಆಕೆಯ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ಎರಿಯೂರು ಪೊಲೀಸರು ಕೇಸ್ ದಾಖಲಿಸಿದ್ದರು.

ರಮ್ಯಾಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಈಗ ಅವರು ಮೂರನೇ ಬಾರಿಗೆ ಗರ್ಭಿಣಿಯಾಗಿರುವುದರಿಂದ ಕಣ್ಣನ್ ಅವರಿಗೆ ಯಾವ ರೀತಿಯ ಮಗು ಜನಿಸುತ್ತದೆ ಎಂದು ನೋಡಲು ಕುತೂಹಲ ಹೆಚ್ಚಾಗಿತ್ತು. ಕಣ್ಣನ್ ತನಗೆ ಮಗನೇ ಬೇಕೆಂದು ಹಠ ಹಿಡಿದಿದ್ದ. ಆದರೆ, ಅವರಿಗೆ ಹೆಣ್ಣುಮಗು ಹುಟ್ಟಲಿದೆ ಎಂಬುದು ಸ್ಕ್ಯಾನಿಂಗ್ ವೇಳೆ ಗೊತ್ತಾಗಿತ್ತು. ಹೀಗಾಗಿ, ಆಕೆಯ ಗರ್ಭಪಾತ ಮಾಡಲು ನಿರ್ಧರಿಸಿದ್ದನು.ಮನೆಯಲ್ಲೇ ಆಕೆಗೆ ಗರ್ಭಪಾತ ಮಾಡಿಸುವಾಗ ಆಕೆ ಮೃತಪಟ್ಟಿದ್ದರು.

ಅವರು ನರ್ಸ್ ಸುಕನ್ಯಾ (35) ಮತ್ತು ಸೇಲಂನ ಬ್ರೋಕರ್ ವನಿತಾ (35) ಅವರನ್ನು ಸಂಪರ್ಕಿಸಿದ ಮನೆಯಲ್ಲಿಯೇ ರಮ್ಯಾಗೆ ಗರ್ಭಪಾತ ಮಾಡಲು ಸಲಹೆ ಕೇಳಿದ್ದ. ಅವರು ಆ ಬಗ್ಗೆ ಕಣ್ಣನ್​ಗೆ ವಿವರಿಸಿದ್ದರು. ಗರ್ಭಪಾತ ಮಾಡಿಸಿದ ನಂತರ ರಮ್ಯಾ ಅವರ ಆರೋಗ್ಯ ಹದಗೆಟ್ಟಿತು. ಬಳಿಕ ಅವರು ನಿಧನರಾದರು. ಇದನ್ನು ಮರೆಮಾಡಲು, ಕಣ್ಣನ್ ರಮ್ಯಾ ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಎಲ್ಲರನ್ನೂ ನಂಬಿಸಿದರು.

ಕಣ್ಣನ್ ತನ್ನ ಸಂಬಂಧಿಕರಿಗೆ ರಮ್ಯಾ ಅನಿರೀಕ್ಷಿತವಾಗಿ ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾಗಿ ಹೇಳಿದ್ದರು. ನಂತರ, ಆ ಮಹಿಳೆಯ ಕುಟುಂಬ ಮತ್ತು ಸಂಬಂಧಿಕರು ಅದನ್ನು ನಂಬಿ ದುಃಖದಿಂದ ಆಕೆಯ ಅಂತ್ಯಕ್ರಿಯೆಯನ್ನು ನೆರವೇರಿಸಿ ಕಳುಹಿಸಿದರು.

ಆದರೆ, ಅವರಿಗೆ ಕಣ್ಣನ್ ಬಗ್ಗೆ ಸ್ವಲ್ಪ ಅನುಮಾನವಿತ್ತು.ಆ ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರಂಭದಲ್ಲಿ, ಕಣ್ಣನ್ ಇದು ಅಪಘಾತ ಎಂದು ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ, ಪೊಲೀಸರಿಗೂ ಅನುಮಾನ ವ್ಯಕ್ತವಾಗಿತ್ತು. ಇದರ ನಂತರ, ಅವರು ತನಿಖೆ ಆರಂಭಿಸಿದ್ದರು.ಈ ವೇಳೆ ಸತ್ಯ ಬಯಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!