March 12, 2026
Thursday, March 12, 2026
spot_img

ಆಟವಾಡುತ್ತಾ ಅಪ್ಪ ತೆಗೆದಿಟ್ಟಿದ್ದ ನೀರಿನ ಸಂಪ್‌ಗೆ ಬಿದ್ದು ಎರಡೂವರೆ ವರ್ಷದ ಕಂದಮ್ಮ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಟ ಆಡುತ್ತಾ ಎರಡೂವರೆ ವರ್ಷದ ಮಗುವೊಂದು ಸಂಪ್‌ಗೆ ಬಿದ್ದು ದಾರುಣ ಅಂತ್ಯ ಕಂಡಿದೆ. ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಮೃತ ಮಗುವನ್ನು ಬ್ಯಾಡರಹಳ್ಳಿಯ ಅಣ್ಣಯ್ಯ ಹಾಗೂ ಋತು ದಂಪತಿಯ ಮಗ ಚಿರಾಗ್‌ ಎಂದು ಗುರುತಿಸಲಾಗಿದೆ. ದಂಪತಿ ಸಂಬಂಧಿಕರ ಮದುವೆಗೆ ತೆರಳಲು ರೆಡಿಯಾಗುತ್ತಿದ್ದರು. ಕಾರ್ ತೊಳೆಯಲು ಸಂಪಿನ ಕ್ಯಾಪ್‌ ತೆರೆದು ಅಣ್ಣಯ್ಯ ಮನೆಯೊಳಗೆ ತೆರಳಿದ್ದರು. ಈ ವೇಳೆ ಆಟವಾಡುತ್ತಿದ್ದ ಚಿರಾಗ್ ಸಂಪ್‌ಗೆ ಬಿದ್ದು ಮೃತ ಪಟ್ಟಿದ್ದಾನೆ.

ಮನೆಯಿಂದ ಹೊರಗೆ ಬಂದು ಮಗು ಎಲ್ಲಿ ಎಂದು ಹುಡುಕಿದಾಗ ಸಂಪ್‌ನಲ್ಲಿ ಕಂದಮ್ಮ ಕಾಣಿಸಿದೆ. ಸಣ್ಣ ಅಜಾಗರೂಕತೆಯಿಂದ ಮಗುವನ್ನು ಕಳೆದುಕೊಂಡ ಕುಟುಂಬ ಬೆಟ್ಟದಷ್ಟು ದುಃಖ ಹೊತ್ತಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !