ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಣೀವಿರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಮಟ್ಟದಲ್ಲಿ ಗಳಿಕೆ ಮಾಡುತ್ತಿದ್ದು, ಆದಿತ್ಯ ಧಾರ್ ನಿರ್ದೇಶನದ ಆಕ್ಷನ್ ಸ್ಪೈ ಥ್ರಿಲ್ಲರ್ ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ. ಆದರೆ ಈಗ, ಚಿತ್ರವು ಪರಿಷ್ಕರಣೆಗೆ ಒಳಗಾಗುತ್ತಿದ್ದು, ಹೊಸ ಆವೃತ್ತಿಯನ್ನು ಇಂದಿನಿಂದ ಪ್ರದರ್ಶಿಸಲಾಗುವುದು.
‘ಧುರಂಧರ್’ ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಈ ಸಿನಿಮಾ 1000 ಕೋಟಿ ಗಳಿಕೆ ದಾಟಿದೆ. ಸಿನಿಮಾವನ್ನು ಮುಗಿಬಿದ್ದು ಜನ ವೀಕ್ಷಿಸುತ್ತಿದ್ದಾರೆ. ಭಾರತೀಯ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಂದ ಭಾರತೀಯ ಸೇನೆಗೆ ಮಾಹಿತಿ ರವಾನೆ ಮಾಡುವ ಕತೆಯನ್ನು ‘ಧುರಂಧರ್’ ಸಿನಿಮಾ ಒಳಗೊಂಡಿದೆ.
ಇದೀಗ ಭಾರತೀಯ ಸರ್ಕಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ‘ಧುರಂಧರ್’ ಸಿನಿಮಾದ ಎರಡು ಸಂಭಾಷಣೆ ಅಥವಾ ಹೆಸರನ್ನು ತೆಗೆಸಿದ್ದು, ಒಂದು ಸಂಭಾಷಣೆಯನ್ನು ಬದಲಾಯಿಸಲು ಸೂಚಿಸಿದೆ.
ಎಲ್ಲ ಚಿತ್ರಮಂದಿರಗಳಿಗೆ ವಿತರಕರು ಮತ್ತು ನಿರ್ಮಾಪಕರು ಮೇಲ್ ಮಾಡಿದ್ದು, ‘ಧುರಂಧರ್’ ಸಿನಿಮಾದ ಹೊಸ ಆವೃತ್ತಿಯನ್ನು ಕ್ಯೂಬ್ ಮೂಲಕ ಡೌನ್ಲೋಡ್ ಮಾಡಿಕೊಂಡು ಹೊಸ ಆವೃತ್ತಿಯನ್ನೇ ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದ್ದು, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸೂಚನೆಯ ಮೇರೆಗೆ ಸಿನಿಮಾದ ಸಂಭಾಷಣೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಹ ಮೇಲ್ನಲ್ಲಿ ತಿಳಿಸಲಾಗಿದೆ.
‘ಧುರಂಧರ್’ ಸಿನಿಮಾನಲ್ಲಿ ಎರಡು ಹೆಸರನ್ನು ತೆಗೆಯಲಾಗಿದ್ದು, ಒಂದು ಸಂಭಾಷಣೆಯನ್ನು ಬದಲಾಯಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಸೂಚನೆಯಂತೆ ಸಿನಿಮಾ ತಂಡ ಈ ಬದಲಾವಣೆಯನ್ನು ಮಾಡಿದೆ. ಅಳಿಸಲಾಗಿರುವ ಎರಡು ಪದಗಳಲ್ಲಿ ‘ಬಲೂಚ್’ ಸಹ ಒಂದಾಗಿದೆ. ಪಾಕಿಸ್ತಾನದ ಬಲೂಚಿಸ್ಥಾನವನ್ನು ಸಿನಿಮಾನಲ್ಲಿ ಬಲೂಚ್ ಎಂದು ಕರೆಯಲಾಗಿದೆ. ಇದರ ಜೊತೆಗೆ ಮತ್ತೊಂದು ಹೆಸರನ್ನು ಸಹ ಅಳಿಸಲಾಗಿದೆ ಅಥವಾ ಬೀಪ್ ಮಾಡಲಾಗಿದೆ. ‘ಧುರಂಧರ್’ ಸಿನಿಮಾದ ಈ ಬದಲಾದ ಆವೃತ್ತಿಯು ಜನವರಿ 1 ರಿಂದಲೇ ಪ್ರಸಾರ ಆಗಲಿದೆ.
‘ಧುರಂಧರ್’ ಸಿನಿಮಾ ಈ ವರ್ಷ ಭಾರತದ ಭಾರಿ ದೊಡ್ಡ ಯಶಸ್ವಿ ಸಿನಿಮಾ ಎನಿಸಿಕೊಂಡಿದೆ. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ 1200 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್, ಅಕ್ಷಯ್ ಖನ್ನ, ಆರ್ ಮಾಧವನ್, ಸಂಜಯ್ ದತ್ ಇನ್ನೂ ಹಲವರು ನಟಿಸಿದ್ದಾರೆ.

