ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು- ಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯುದ್ದಕ್ಕೂ ಇರುವ ಹಳ್ಳಿಗಳ ಮೇಲೆ ಪಾಕಿಸ್ತಾನದ ಎರಡು ಡ್ರೋನ್‌ಗಳು ಸುಳಿದಾಡುತ್ತಿರುವುದು ಪತ್ತೆಯಾಗಿದ್ದು, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಡರಾತ್ರಿ ಘಗ್ವಾಲ್ ಪ್ರದೇಶದ ಚಲ್ಲಿಯಾರಿ ಗ್ರಾಮ ಮತ್ತು ರಾಮಗಢದ ಚಮ್ಲಿಯಾಲ್ ಗ್ರಾಮದ ಮೇಲೆ ಡ್ರೋನ್‌ಗಳು ಕಾಣಿಸಿಕೊಂಡಿವೆ.
ಗಡಿ ಭದ್ರತಾ ಪಡೆ (BSF) ಪೊಲೀಸರೊಂದಿಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಗಡಿಯ ಈ ಭಾಗದಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಮಾದಕವಸ್ತುಗಳು ಪಾಕಿಸ್ತಾನ ಕಡೆಯಿಂದ ಬೀಳದಂತೆ ನೋಡಿಕೊಳ್ಳುತ್ತಿದೆ. ಶೋಧ ಕಾರ್ಯಾಚರಣೆಗಳು ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.