ಹೊಸದಿಗಂತ ವರದಿ ಹೊನ್ನಾವರ :
ಕಾರಿಗೆ ಹೊತ್ತಿಕೊಂಡ ಬೆಂಕಿಯಲ್ಲಿ ಇಬ್ಬರು ಸುಟ್ಟು ಕರಕಲಾದ ದುರ್ಘಟನೆ ಗೇರುಸೊಪ್ಪ-ಸುಳೆಮುರ್ಕಿ ಕ್ರಾಸ್ ಸಮೀಪ ತಡರಾತ್ರಿ ನಡೆದಿದೆ.
ಕಾರು ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು ಒಳಗಿದ್ದ ಇಬ್ಬರು ಪ್ರಯಾಣಿಕರು ಗುರುತು ಪತ್ತೆಯಾಗದ ಸ್ಥಿತಿಯಲ್ಲಿ ಸುಟ್ಟು ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಧಾವಿಸಿ ತನಿಖೆ ಆರಂಭ ಮಾಡಿದ್ದಾರೆ. ಕಾರಿನ ನೊಂದಣಿ ಸಂಖ್ಯೆ ಪತ್ತೆಯಾಗದ ಸ್ಥಿತಿಯಲ್ಲಿ ಕಾರು ಕರಕಲಾಗಿದೆ.
ಮರಕ್ಕೆ ಡಿಕ್ಕಿಯಾಗಿ ಕಾರಿಗೆ ಬೆಂಕಿ: ಇಬ್ಬರು ಪ್ರಯಾಣಿಕರು ಸಜೀವ ದಹನ

