ಹೊಸದಿಗಂತ ವರದಿ ಬಾಗಲಕೋಟೆ:
ರಾತ್ರಿ ವೇಳೆ ಮನೆಗಳ ಕೀಲಿಯನ್ನು ಮುರಿದು ಚಿನ್ನಾಭರಣವನ್ನು ದೋಚಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಮುಧೋಳ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾತ್ರಿ ಸಮಯದಲ್ಲಿ ಕೀಲಿ ಹಾಕಿದ ಮನೆಗಳನ್ನು ಕೀಲಿ ಮುರಿದು ಒಳಹೊಕ್ಕು ಮನೆಯಲ್ಲಿನ ಬಂಗಾರ, ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿರುವ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು ಇದರ ಬೆನ್ನು ಹತ್ತಿದ ಪೊಲೀಸ್ ಅಕಾರಿಗಳು ತನಿಖೆ ನಡೆಸಿ ಮುಧೋಳದ ದುರ್ಗಪ್ಪ ಫಕೀರಪ್ಪ ವಾಲ್ಮೀಕಿ (ಹಾಲಿ ವಸ್ತಿ ಕೆಂಗೇರಿ ಮಡ್ಡಿ ಮಹಾಲಿಂಗಪುರ),ಜಮಖಂಡಿಯ (ಹಾಲಿ ವಸ್ತಿ ವಿಜಯಪುರ ಅಂಬೇಡ್ಕರ ನಗರ ) ರಾಮಾಚಾರಿ ಉರ್ಫ ಯಲ್ಲಪ್ಪ ಈರಪ್ಪ ಗಡ್ಡಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕಳ್ಳತನವಾದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ೫೦ ಗ್ರಾಂ ತೂಕದ ವಿವಿಧ ಬಂಗಾರದ ಆಭರಣಗಳು ಪ್ರಸುತ್ತ ಮೌಲ್ಯ ೭,೭೦,೦೦೦ ರೂ ಹಾಗೂ ೧೩೦ ಗ್ರಾಂ ತೂಕದ ವಿವಿಧ ಬೆಳ್ಳಿಯ ಆಭರಣಗಳು ಪ್ರಸುತ್ತ ಮೌಲ್ಯ ೩೯,೦೦೦ ರೂ ಹೀಗೆ ಒಟ್ಟು ೮,೦೯,೦೦೦ ರೂ ಮೌಲ್ಯದ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.



