March 19, 2026
Thursday, March 19, 2026
spot_img

ಯುಗಾದಿ ಸಂಭ್ರಮ: ಕೆಆರ್ ಮಾರ್ಕೆಟ್‌ನಲ್ಲಿ ಜನಸಾಗರ, ಖರೀದಿ ಜೋರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಯುಗಾದಿ ಹಬ್ಬದ ಸಂಭ್ರಮ ಗರಿಗೆದರಿದ್ದು, ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಚಟುವಟಿಕೆ ಭಾರಿ ಪ್ರಮಾಣದಲ್ಲಿ ಕಂಡುಬರುತ್ತಿದೆ. ಮಧ್ಯರಾತ್ರಿಯಿಂದಲೇ ಮಾರುಕಟ್ಟೆ ಸದ್ದುಮಾಡುತ್ತಿದ್ದು, ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಿಂದ ವ್ಯಾಪಾರಸ್ಥರು ಆಗಮಿಸಿ ಮಾರಾಟದಲ್ಲಿ ತೊಡಗಿದ್ದಾರೆ.

ಹೂವಿನ ಬೆಳೆಗಾರರು ನೇರವಾಗಿ ಮಾರಾಟಕ್ಕೆ ಇಳಿದಿರುವುದರಿಂದ ಮಾರುಕಟ್ಟೆಯಲ್ಲಿ ಚಟುವಟಿಕೆ ಹೆಚ್ಚಾಗಿದೆ. ಜನರು ಹೂವು, ಹಣ್ಣು, ಮಾವಿನ ಎಲೆಗಳು ಹಾಗೂ ಬೇವಿನ ಸೊಪ್ಪು ಖರೀದಿಸಲು ಮುಗಿಬಿದ್ದ ದೃಶ್ಯಗಳು ಕಂಡುಬಂದಿವೆ.

ಹಬ್ಬದ ಬೇಡಿಕೆ ಹೆಚ್ಚಾದ ಹಿನ್ನೆಲೆ ಹೂವು ಹಾಗೂ ಹಣ್ಣಿನ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಮಲ್ಲಿಗೆ ಹೂವು ಕಿಲೋಗೆ ಸುಮಾರು 1,500 ರಿಂದ 1,800 ರೂಪಾಯಿ ದರ ತಲುಪಿದರೆ, ಸೇವಂತಿಗೆ 200 ರಿಂದ 250 ರೂಪಾಯಿ, ಚೆಂಡು ಹೂವು 40 ರಿಂದ 50 ರೂಪಾಯಿವರೆಗೆ ದೊರೆಯುತ್ತಿದೆ. ಬೇವಿನ ಹಾಗೂ ಮಾವಿನ ಎಲೆಗಳ ಕಟ್ಟೆಗಳು ಸಹ ಸಾಮಾನ್ಯ ದರಕ್ಕಿಂತ ಸ್ವಲ್ಪ ಹೆಚ್ಚಾಗಿವೆ.

ಒಟ್ಟಾರೆ, ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಕಳೆ ಹೆಚ್ಚಿದ್ದು, ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !