Sunday, September 7, 2025

ರಷ್ಯಾದ ಆಯಿಲ್‌ ಪೈಪ್‌ಲೈನ್‌ ಮೇಲೆ ಉಕ್ರೇನ್‌ ಪ್ರತಿದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ನಡೆಸಿದ ಭೀಕರ ವಾಯುದಾಳಿಗೆ ಉಕ್ರೇನ್‌ ಪ್ರತಿದಾಳಿ ನಡೆಸಿದೆ. ರಷ್ಯಾದ ಬ್ರಿಯಾನ್ಸ್ಕ್‌ ಪ್ರದೇಶದಲ್ಲಿನ ಡ್ರುಜ್ಬಾ ತೈಲ ಪೈಪ್‌ಲೈನ್‌ ಮೇಲೆ ದಾಳಿ ನಡೆಸಿದ್ದು, ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಉಕ್ರೇನ್‌ ಡ್ರೋನ್ ಪಡೆಗಳ ಕಮಾಂಡರ್ ರಾಬರ್ಟ್ ಬ್ರೋವ್ಡಿ ತಿಳಿಸಿದ್ದಾರೆ.

ಒಂದು ದಿನದ ಹಿಂದಷ್ಟೇ ರಷ್ಯಾ-ಉಕ್ರೇನ್‌ ಮೇಲೆ ಭೀಕರ ವಾಯುದಾಳಿ ನಡೆಸಿತ್ತು. ಬರೋಬ್ಬರಿ 800 ಡ್ರೋನ್‌, 4 ಖಂಡಾಂತರ ಕ್ಷಿಪಣಿ ಸೇರಿದಂತೆ 13 ಮಿಸೈಲ್‌ಗಳಿಂದ ದಾಳಿ ನಡೆಸಿತ್ತು. ಇದರಿಂದ ಕೈವ್‌ನ ಪೆಚೆರ್ಸ್ಕಿ ಆಡಳಿತ ಕಚೇರಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಮಿಲಿಟರಿ ಆಡಳಿತದ ಮುಖ್ಯಸ್ಥ ತಿಮರ್ ಟ್ಕಾಚೆಂಕೊ ಭಾನುವಾರ ತಿಳಿಸಿದ್ದಾರೆ.

ಇನ್ನೂ ರಷ್ಯಾದ ದಾಳಿಯಿಂದ ಕೈವ್‌ನಲ್ಲಿ ಒಂದು ಮಗು ಸೇರಿ ಮೂವರು ಸಾವನ್ನಪ್ಪಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ. ಹಲವು ಕಟ್ಟಡಗಳು ಹಾನಿಗೆ ಒಳಗಾಗಿದ್ದು, ಇದರಲ್ಲಿ ಸರ್ಕಾರಿ ಕಟ್ಟಡಗಳೂ ಸೇರಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ