Thursday, January 8, 2026

ಉಮರ್, ಶಾರ್ಜೀಲ್‌​​​ಗೆ ಸಿಗದ ಜಾಮೀನು: ಜೆಎನ್‌ಯುವಿನಲ್ಲಿ ಪ್ರಧಾನಿ ಮೋದಿ, ಶಾ ವಿರುದ್ಧ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಗಲಭೆ ಪ್ರಕರಣದಲ್ಲಿ ಜೈಲು ಸೇರಿರುವ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದರ ಬೆನ್ನಲ್ಲೇ ಜವಾಹರ್‌ಲಾಲ್ ನೆಹರೂ ಯೂನಿವರ್ಸಿಟಿ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು, ನಾಯಕರು ಪ್ರತಿಭಟನೆ ನಡೆಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ದ ಘೋಷಣೆಗಳನ್ನು ಕೂಗಲಾಗಿದೆ. ವಿವಾದಾತ್ಮಕ ಹಾಗೂ ನಿಯಮ ಬಾಹಿರ ಘೋಷಣೆಗಳನ್ನು ಕೂಗಿದ್ದಾರೆ.

35 ನಿಮಿಷಗಳ ವಿಡಿಯೋ ವೈರಲ್ ಆಗಿದ್ದು, ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮೋದಿ,ಶಾ ಕಿ ಕಬರ್ ಖುದೇಗಿ, ಜೆಎನ್‌ಯು ಕಿ ಧರ್ತಿ ಪರ್ ಎಂಬ ಘೋಷಣೆಗಳನ್ನು ಕೂಗಲಾಗಿದೆ.

2020ರ ದೆಹಲಿ ಗಲಭೆಗೂ ಇದೇ ಜೆನ್‌ಯು ಕ್ಯಾಂಪಸ್‌ನಲ್ಲಿ ಭಾರಿ ಪ್ರಚೋದನೆ ನೀಡುವ ಭಾಷಣಗಳು, ಷಡ್ಯಂತ್ರಗಳು ನಡೆದಿತ್ತು. ಬಳಿಕ ದೆಹಲಿ ಗಲಭೆಯಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು ಘಟನೆ ಸಂಬಂಧ ಹಲವರನ್ನು ಬಂಧಿಸಲಾಗಿದೆ. ಈ ಪೈಕಿ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಇದೀಗ ಜೈಲಿನಲ್ಲಿದ್ದಾರೆ. 2020ರ ಬಳಿಕ ಜೆನ್‌ಯು ಕ್ಯಾಂಪಸ್‌ನಲ್ಲಿ ದೇಶ ವಿರೋಧಿ ಘೋಷಣೆಗಳು ಇಳಿಮುಖವಾಗಿತ್ತು. ಇದೀಗ ಮತ್ತೆ ಜೆಎನ್‌ಯು ಕ್ಯಾಂಪಸ್‌ನಲ್ಲಿ ಘೋಷಣೆಗಳು ಮೊಳಗತೊಡಗಿದೆ.

ಘೋಷಣೆ ಖಂಡಿಸಿದ ಎಬಿವಿಪಿ ಸಂಘಟನೆ
ಜೆಎನ್‌ಯು ಕ್ಯಾಂಪಸ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಕೂಗಿರುವ ಘೋಷಣೆಗಳನ್ನು ಜೆಎನ್‌ಯುವಿನ ಎಬಿವಿಪಿ ಸಂಘಟನೆ ಖಂಡಿಸಿದೆ. ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದೆಹಲಿ ಪೊಲೀಸರು ಅಲರ್ಟ್
ಜೆಎನ್‌ಯು ಕ್ಯಾಂಪಸ್‌ನಲ್ಲಿ ಕೂಗಿದ ಘೋಷಣೆಗಳ ವಿಡಿಯೋ ದೆಹಲಿ ಪೊಲೀಸರ ಕೈಸೇರಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದರೆ ವಿಡಿಯೋ ಆಧರಿಸಿ ತನಿಖೆ ನಡೆಸಲಾಗುತ್ತದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

error: Content is protected !!