January15, 2026
Thursday, January 15, 2026
spot_img

ಅಂಡರ್-19 ಏಷ್ಯಾಕಪ್‌ನ: ಸೆಮಿಫೈನಲ್‌ಗೆ ಎಂಟ್ರಿಕೊಟ್ಟ ಭಾರತ ಸಹಿತ ನಾಲ್ಕು ತಂಡಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಡರ್-19 ಏಷ್ಯಾಕಪ್‌ನ ಲೀಗ್ ಸುತ್ತು ಅಂತ್ಯಗೊಂಡಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ.

ಡಿಸೆಂಬರ್ 17 ರ ಬುಧವಾರ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಅಂತಿಮ ಲೀಗ್ ಹಂತದ ಪಂದ್ಯದ ನಂತರ, ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಯಾವ ತಂಡಗಳನ್ನು ಎದುರಿಸಲಿವೆ ಎಂಬುದು ಸ್ಪಷ್ಟವಾಗಿದೆ.

ಗ್ರೂಪ್ ಎ ಯಿಂದ ಭಾರತವು ತನ್ನ ಮೂರು ಗುಂಪು ಹಂತದ ಪಂದ್ಯಗಳನ್ನು ಗೆದ್ದು ಅಜೇಯ ತಂಡವಾಗಿ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ. ಇತ್ತ ಇದೇ ಗುಂಪಿನಲ್ಲಿದ್ದ ಪಾಕಿಸ್ತಾನ ಕೂಡ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇತ್ತ ಗ್ರೂಪ್ ಬಿ ಯಿಂದ ಬಾಂಗ್ಲಾದೇಶವು ತನ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಹ್ಯಾಟ್ರಿಕ್ ಜಯಗಳಿಸಿ ಸೆಮಿಫೈನಲ್​ಗೆ ಅರ್ಹತೆ ಪಡೆದರೆ, ಇದೇ ಗುಂಪಿನಲ್ಲಿದ್ದ ಶ್ರೀಲಂಕಾ ಕೂಡ ಎರಡನೇ ತಂಡವಾಗಿ ಸೆಮಿಫೈನಲ್​ ಆಡಲಿದೆ.

ಇದೀಗ ಗ್ರೂಪ್ ಎ ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಯುವ ಪಡೆ, ಗ್ರೂಪ್​ ಬಿನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಸೆಮಿಫೈನಲ್​ನಲ್ಲಿ ಎದುರಿಸಬೇಕಾಗಿದೆ. ಅಂದರೆ ಭಾರತ ಹಾಗೂ ಶ್ರೀಲಂಕಾ ನಡುವೆ ಮೊದಲ ಸೆಮಿಫೈನ್ ಪಂದ್ಯ ನಡೆಯಲಿದೆ. ಆ ಬಳಿಕ ಗ್ರೂಪ್​ ಬಿನಲ್ಲಿ ಅಗ್ರಸ್ಥಾನದಲ್ಲಿರುವ ಬಾಂಗ್ಲಾದೇಶ ತಂಡ, ಗ್ರೂಪ್ ಎ ನಲ್ಲಿ ಎರಡನೇ ಸ್ಥಾನ ಪಡೆದಿರುವ ಪಾಕಿಸ್ತಾನವನ್ನು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಗೆದ್ದ ತಂಡಗಳು ಫೈನಲ್​ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ.

ಡಿಸೆಂಬರ್ 19 – ಭಾರತ vs ಶ್ರೀಲಂಕಾ U19 ಏಷ್ಯಾಕಪ್ ಸೆಮಿಫೈನಲ್ ಪಂದ್ಯ- ಬೆಳಿಗ್ಗೆ 10:30
ಡಿಸೆಂಬರ್ 19 – ಬಾಂಗ್ಲಾದೇಶ vs ಪಾಕಿಸ್ತಾನ U19 ಏಷ್ಯಾಕಪ್ ಸೆಮಿಫೈನಲ್- ಬೆಳಿಗ್ಗೆ 10:30

ಭಾರತ ತಂಡ: ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ(ನಾಯಕ), ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್, ಅಭಿಗ್ಯಾನ್ ಕುಂದು(ವಿಕೆಟ್ ಕೀಪರ್), ಹರ್ವಂಶ್ ಪಂಗಾಲಿಯಾ, ಖಿಲಾನ್ ಪಟೇಲ್, ಹೆನಿಲ್ ಪಟೇಲ್, ದೀಪೇಶ್ ದೇವೇಂದ್ರನ್, ಉಧವ್ ಮೋಹನ್, ನಮನ್ ಪುಷ್ಪಕ್, ವೇದಾಂತ್ ತ್ರಿವೇದಿ, ಕಿಶನ್ ಕುಮಾರ್ ಸಿಂಗ್, ಆರನ್ ಜಾರ್ಜ್, ಯುವರಾಜ್ ಗೋಹಿಲ್.

Most Read

error: Content is protected !!