ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಉಸ್ಮಾನ್ ಹಾದಿ ಸಾವಿನ ನಂತರ ಉಂಟಾಗಿರುವ ಉದ್ವಿಗ್ನತೆ ನಡುವೆ, ರಾಷ್ಟ್ರೀಯ ನಾಗರಿಕ ಪಕ್ಷದ ಖುಲ್ನಾ ವಿಭಾಗೀಯ ಮುಖ್ಯಸ್ಥ ಮೊತಲೆಬ್ ಶಿಕ್ದಾರ್ (42) ಅವರ ತಲೆಗೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ.
ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಯಾದ ಕೆಲವು ದಿನಗಳ ನಂತರ, ನೈಋತ್ಯ ಖುಲ್ನಾ ನಗರದಲ್ಲಿ ಈ ದಾಳಿ ನಡೆದಿದೆ.
ಮಾಜಿ ನಾಯಕಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲು ಕಾರಣವಾದ 2024ರ ಪ್ರತಿಭಟನೆಗಳ ಸಂಘಟನೆಯಲ್ಲಿ ಶಿಕ್ದರ್ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ಎನ್‌ಸಿಪಿಯ ಖುಲ್ನಾ ವಿಭಾಗದ ಮುಖ್ಯಸ್ಥರು ಮತ್ತು ಶ್ರಮಿಕ್ ಶಕ್ತಿಯ ಕೇಂದ್ರ ಸಂಘಟಕರಾಗಿದ್ದರು.

