Saturday, October 18, 2025

ಪ್ರಧಾನಿಯಾಗಲು ಅನ್ ಫಿಟ್… ಐ ಹೇಟ್ ಇಂಡಿಯಾ ಪ್ರವಾಸಕ್ಕೆ ಬೆಸ್ಟ್: ರಾಹುಲ್​ ಗಾಂಧಿ ವಿರುದ್ಧ ಅಮೆರಿಕದ ಗಾಯಕಿ ವಾಗ್ದಾಳಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿದೇಶಗಳಿಗೆ ಹೋಗಿ ಭಾರತದ ವಿರುದ್ಧ ಮಾತನಾಡುವುದನ್ನು ಮುಂದುವರಿಸಿದ್ದು,ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಟ್ರಂಪ್ ಬಗ್ಗೆ ಭಯಭೀತರಾಗಿದ್ದಾರೆ” ಎಂದು ಹೇಳಿಕೆ ನೀಡಿದ್ದರು.

ಇದೀಗ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳ ವಿರುದ್ಧ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಇಂದು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ರಾಹುಲ್​ ಗಾಂಧಿ ವಿರುದ್ಧ ಚಾಟಿ ಬೀಸಿದ ಅವರು, ‘ನೀವು ತಪ್ಪು ರಾಹುಲ್ ಗಾಂಧಿ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷ ಟ್ರಂಪ್‌ಗೆ ಹೆದರುವುದಿಲ್ಲ. ಪ್ರಧಾನಿ ಮೋದಿ ದೀರ್ಘ ಆಟವನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅಮೆರಿಕದೊಂದಿಗಿನ ಅವರ ರಾಜತಾಂತ್ರಿಕತೆಯು ಕಾರ್ಯತಂತ್ರದ್ದಾಗಿದೆ ಎಂದಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸದಾ ಭಾರತಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ. ನಾನು ಅದನ್ನು ಶ್ಲಾಘಿಸುತ್ತೇನೆ. ಒಂದು ದೇಶದ ನಾಯಕನಾಗಿ ಆ ದೇಶಕ್ಕೆ ಏನು ಬೇಕು ಎನ್ನುವುದು ಮೋದಿ ಅವರಿಗೆ ಚೆನ್ನಾಗಿ ಅರಿವಿದೆ’ ಎಂದಿದ್ದಾರೆ.

‘ದೇಶವನ್ನು ಮುನ್ನಡೆಸಲು ನಿಮಗೆ ಯಾವುದೇ ಅರ್ಹತೆ, ಕೌಶಲುಗಳು ಇಲ್ಲ. ಓರ್ವ ನಾಯಕನ ಬಗ್ಗೆ ನೀವು ಆಡುವ ಮಾತುಗಳನ್ನು ನೋಡಿದಾಗ ಆ ನಾಯಕತ್ವವನ್ನು ನೀವು ಹೇಗೆ ಅರ್ಥ ಮಾಡಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆಯೇ ನಿಮ್ಮ ಮನಸ್ಥಿತಿ ಅರ್ಥವಾಗುತ್ತದೆ. ನೀವು ಭಾರತದ ಪ್ರಧಾನಿಯಾಗಲು ಕುಶಾಗ್ರಮತಿ ಹೊಂದಿಲ್ಲ. ನೀವು ಏನಿದ್ದರೂ ‘ಐ ಹೇಟ್ ಇಂಡಿಯಾ’ ಪ್ರವಾಸಕ್ಕೆ ಹಿಂತಿರುಗುವುದು ಉತ್ತಮ’ ಎಂದು ಬರೆದುಕೊಂಡಿದ್ದಾರೆ.

ನಿನ್ನೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಪ್ರಧಾನಿ ಮೋದಿ ಭಯಗೊಂಡಿದ್ದಾರೆ. ಪ್ರಧಾನಿ ಮೋದಿ ಟ್ರಂಪ್‌ಗೆ ಹೆದರುತ್ತಾರೆ. ಭಾರತ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ಟ್ರಂಪ್ ನಿರ್ಧರಿಸಲು ಮತ್ತು ಘೋಷಿಸಲು ಮೋದಿ ಏಕೆ ಅವಕಾಶ ಮಾಡಿ ಕೊಡುತ್ತಾರೆ? ಪದೇ ಪದೇ ಭಾರತವನ್ನು ನಿಂದಿಸುತ್ತಿದ್ದರೂ ಟ್ರಂಪ್ ಅವರೊಂದಿಗೆ ಮೋದಿ ಮಾತನಾಡಿ ಅಭಿನಂದನೆ ಹೇಳುತ್ತಿರುತ್ತಾರೆ. ನಮ್ಮ ದೇಶದ ಹಣಕಾಸು ಸಚಿವರ ಅಮೆರಿಕ ಭೇಟಿಯನ್ನು ರದ್ದುಗೊಳಿಸಲಾಗಿದೆ. ಶರ್ಮ್ ಎಲ್-ಶೇಖ್ ಶೃಂಗಸಭೆಗೆ ಮೋದಿ ಹೋಗಲಿಲ್ಲ. ಇದರ ಅರ್ಥವೇನು? ಎಂದು ಪ್ರಶ್ನಿಸಿದ್ದರು.

error: Content is protected !!