ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ವಿಧಾನ ಸಭೆಯಲ್ಲಿ ಇಂದು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸಲಾಗಿದೆ.
ಇಂದು ಗುಜರಾತ್ ವಿಧಾನಸಭೆ ಸತತ ಏಳು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಧ್ವನಿ ಮತಕ್ಕೆ ಹಾಕಲಾಯಿತು. ಈ ವೇಳೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ವಿರೋಧ ವ್ಯಕ್ತಪಡಿಸಿದ್ದು, ಆದರೆ ಅಂತಿಮವಾಗಿ ಬಹುಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಗಿದೆ.
ಈ ಮಸೂದೆ ದ್ವಿಪತ್ನಿತ್ವವನ್ನು ಸಂಪೂರ್ಣ ನಿಷೇಧಿಸುತ್ತದೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ಮೂಲ ಉದ್ದೇಶವನ್ನು ಹೊಂದಿದೆ.
ಮಸೂದೆ ಅಂಗೀಕಾರಗೊಂಡ ಬೆನ್ನಲ್ಲೇ ಬಿಜೆಪಿ, ಎಲ್ಲರಲ್ಲಿ ಸಮಾನತೆಯನ್ನು ದೃಢಪಡಿಸುವಲ್ಲಿ ಪ್ರಮುಖ ಹೆಗ್ಗುರುತು ಎಂದು ಬಣ್ಣಿಸಿದ್ದು, ಕಾಂಗ್ರೆಸ್, ಮುಸ್ಲಿಂ ವಿರೋಧಿ ಎಂದು ವಿರೋಧಿಸಿದೆ.
ಸಿಎಂ ಭೂಪೇಂದ್ರ ಪಟೇಲ್ ಸರಕಾರ ಈ ಮಸೂದೆಗೆ ‘ಗುಜರಾತ್ ಏಕರೂಪ ನಾಗರಿಕ ಸಂಹಿತೆ 2026’ ಎಂದು ಹೆಸರಿಸಿದ್ದು, ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ನಿವಾಸಿಗಳಿಗೂ ಅನ್ವಯಿಸುತ್ತದೆ ಎಂದು ಹೇಳಿಕೊಂಡಿದೆ. ಆದರೆ ಸಂವಿಧಾನದ ಅಡಿಯಲ್ಲಿ ಎಸ್ಟಿ ಸದಸ್ಯರಿಗೆ ಮತ್ತು ಕೆಲವು ಗುಂಪುಗಳಿಗೆ ಅನ್ವಯಿಸುವುದಿಲ್ಲ ಎಂದು ಮಸೂದೆಯಲ್ಲಿ ಹೇಳಲಾಗುತ್ತದೆ.
2024ರಲ್ಲಿ ಉತ್ತರಾಖಂಡ ಸರಕಾರ ಈ ಮಸೂದೆಯನ್ನು ಮೊದಲು ಅಂಗೀಕಾರ ಮಾಡಿತ್ತು. ಇದೀಗ ಗುಜರಾತ್ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕರಿಸಿದ ಎರಡನೇ ರಾಜ್ಯವಾಗಿ ಗುರುತಿಸಿಕೊಂಡಿದೆ.



