February 15, 2026
Sunday, February 15, 2026
spot_img

ಯೂನಿಫಾರ್ಮ್ ಓಕೆ, ಐಡಿ ಕಾರ್ಡ್ ಎಲ್ಲಿ? ಜರ್ಮನಿಯಲ್ಲಿ ಪಾಕ್ ಸೇನಾ ಮುಖ್ಯಸ್ಥನಿಗೆ ಮುಜುಗರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಯಮ ಅಂದಮೇಲೆ ಎಲ್ಲರಿಗೂ ಒಂದೇ ಎಂಬುದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಮನವರಿಕೆಯಾದಂತಿದೆ. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರಿಗೆ ಜರ್ಮನಿಯ ಭದ್ರತಾ ಸಿಬ್ಬಂದಿ ಬಿಗಿ ತಪಾಸಣೆಯ ಬಿಸಿ ಮುಟ್ಟಿಸಿದ್ದಾರೆ.

ಸಂಪೂರ್ಣ ಸೇನಾ ಸಮವಸ್ತ್ರದಲ್ಲಿದ್ದ ಅಸಿಮ್ ಮುನೀರ್ ಅವರು ತಮ್ಮ ಇಬ್ಬರು ಸಿಬ್ಬಂದಿಯೊಂದಿಗೆ ಸಭಾಂಗಣಕ್ಕೆ ಪ್ರವೇಶಿಸಲು ಮುಂದಾದಾಗ, ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. “ನಿಮ್ಮ ಗುರುತಿನ ಚೀಟಿ (ID Card) ಎಲ್ಲಿದೆ?” ಎಂದು ಪ್ರಶ್ನಿಸಿದಾಗ ಮುನೀರ್ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ.

ಅಂತರಾಷ್ಟ್ರೀಯ ಗಣ್ಯರು ಭಾಗವಹಿಸುವ ಕಾರ್ಯಕ್ರಮವಾದ್ದರಿಂದ ಐಡಿ ಕಾರ್ಡ್ ಕಡ್ಡಾಯವಾಗಿತ್ತು. ಆದರೆ ತಾವು ಸಮವಸ್ತ್ರದಲ್ಲಿದ್ದೇನೆ ಎಂಬ ಕಾರಣಕ್ಕೆ ಅವರು ಕಾರ್ಡ್ ಧರಿಸಿರಲಿಲ್ಲ. ಕೊನೆಗೆ ಅವರ ಜೊತೆಗಿದ್ದ ಸಿಬ್ಬಂದಿ ಐಡಿ ತೋರಿಸಿದ ನಂತರವಷ್ಟೇ ಅವರಿಗೆ ಒಳಗೆ ಹೋಗಲು ಅವಕಾಶ ನೀಡಲಾಯಿತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !