ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾಳೆ ನಡೆಯಲಿರುವ ವಿಕಸಿತ ಭಾರತ್ ಬ್ಯುಲ್ಡಥಾನ್ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರದ ಯುವಜನರಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕರೆ ನೀಡಿದ್ದಾರೆ.
2025ರ ಅಕ್ಟೋಬರ್ 13, ಸೋಮವಾರ ಬೆಳಗ್ಗೆ 10ರಿಂದ ರಾತ್ರಿ 11 ಗಂಟೆಯವರೆಗೆ ವಿಕಸಿತ್ ಭಾರತ್ ಬ್ಯುಲ್ಡಥಾನ್ ನಡೆಯಲಿದೆ.
ತಂತ್ರಜ್ಞಾನ ಅಳವಡಿಕೆ ಮೂಲಕ ಭಾರತೀಯ ಭಾಷೆಗಳನ್ನು ಉತ್ತೇಜಿಸುವಂತಹ ನ್ಯಾಷನಲ್ ಎಜುಕೇಶನ್ ಪಾಲಿಸಿ 2020 ಭಾಗವಾಗಿ ಈ ವಿಕಸಿತ್ ಭಾರತ್ ಬ್ಯುಲ್ಡಥಾನ್ ಅನ್ನು ನಡೆಸಲಾಗುತ್ತಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಎಐ ಭಾಷಾಂತರಿಸಿದ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಕನ್ನಡವೂ ಒಳಗೊಂಡಂತೆ ಹತ್ತು ಭಾಷೆಗಳಲ್ಲಿ ಇರುವ ವಿಡಿಯೋ ಸಂದೇಶಗಳನ್ನು ಪ್ರತ್ಯೇಕವಾಗಿ ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರಕ್ಕಾಗಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ, ಜಗತ್ತನ್ನು ಪ್ರೇರೇಪಿಸುತ್ತಿರುವ ಭಾರತದ ಯುವಶಕ್ತಿಯ ಶಕ್ತಿಯನ್ನು ಜಗತ್ತು ನೋಡಲಿ. ಈಗಲೇ, ವಿ ಬಿ, ಬಿ ಡಾಟ್ ಎಂಐಸಿ ಡಾಟ್ ಗವ್.. ಡಾಟ್ ಇನ್ ನಲ್ಲಿ ನೋಂದಾಯಿಸಿ. pic.twitter.com/ED2Dh3Z5KS
https://x.com/dpradhanbjp/status/1977070442486591536?ref_src=twsrc%5Etfw%7Ctwcamp%5Etweetembed%7Ctwterm%5E1977070442486591536%7Ctwgr%5E840f50cd55388a6cd260e3193215cdbf6aa5005b%7Ctwcon%5Es1_&ref_url=https%3A%2F%2Ftv9kannada.com%2Fnational%2Fviksit-bharat-buildathon-on-october-13th-minister-dharmendra-pradhan-urges-youth-to-join-in-1093244.html
ವಿವಿಧ ಭಾಷೆಗಳಲ್ಲಿ ಜನರನ್ನು ತಲುಪಲು ಸರ್ಕಾರವು ಎಐ ಅನ್ನು ಸದ್ಬಳಕೆ ಮಾಡಿಕೊಳ್ಳುತ್ತಿದೆ. ಇದರಿಂದ ಶಿಕ್ಷಣದಲ್ಲಿ ತಂತ್ರಜ್ಞಾನ ಸುಧಾರಣೆ ಮತ್ತು ಭಾಷಾ ವೈವಿಧ್ಯತೆಗೆ ಅನುಕೂಲವಾಗಲಿದೆ. ವಿಕಸಿತ ಭಾರತ್ ಬ್ಯುಲ್ಡಥಾನ್ನಂತಹ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನರ ಪಾಲ್ಗೊಳ್ಳುವಿಕೆಗೆ ಉತ್ತೇಜನ ಸಿಕ್ಕಂತಾಗುತ್ತದೆ.
ಏನಿದು ವಿಕಸಿತ್ ಭಾರತ್ ಬ್ಯುಲ್ಡಥಾನ್?
ದೇಶಾದ್ಯಂತ 3 ಲಕ್ಷ ಪ್ರೌಢಶಾಲೆಗಳ 5 ಕೋಟಿಗೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರಾಯೋಗಿಕ ಪ್ರತಿಭೆಗಳನ್ನು ತೋರ್ಪಡಿಸಲು ಇರುವ ಒಂದು ಅವಕಾಶವಾಗಿದೆ. ಆಸಕ್ತ ಮಕ್ಕಳು ತಮ್ಮ ಶಾಲೆಗಳಲ್ಲಿ ಶಿಕ್ಷಕರ ನೆರವಿನಿಂದ ಈ ಅಭಿಯಾನಕ್ಕೆ ನೊಂದಾಯಿಸಿಕೊಳ್ಳಬಹುದು.
ಸ್ವಾವಲಂಬಿ ಭಾರತ, ಸ್ವದೇಶೀ, ವೋಕಲ್ ಫಾರ್ ಲೋಕಲ್ ಮತ್ತು ಸಮೃದ್ಧ್ ಭಾರತ್, ಈ ನಾಲ್ಕು ಥೀಮ್ಗಳಲ್ಲಿ ರಾಷ್ಟ್ರ ನಿರ್ಮಾಣಕ್ಕೆ ನೆರವಾಗುವಂತಹ ಯಾವುದಾದರೂ ಐಡಿಯಾ ಇದ್ದರೆ ಮಕ್ಕಳು ಪ್ರಸ್ತುತಪಡಿಸಬಹುದು.
ರಾಷ್ಟ್ರಮಟ್ಟದಲ್ಲಿ 10 ಮಂದಿ ವಿಜೇತರು, ರಾಜ್ಯ ಮಟ್ಟದಲ್ಲಿ 100 ಮಂದಿ ಹಾಗೂ ಜಿಲ್ಲಾ ಮಟ್ಟದಲ್ಲಿ 1,000 ಮಂದಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಒಟ್ಟು ಬಹುಮಾನದ ಮೊತ್ತ ಒಂದು ಕೋಟಿ ರೂ ಇರುತ್ತದೆ.