ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಕ್ವಾಲ್ಕಾಮ್ ಟೆಕ್ನಾಲಜೀಸ್ ತಯಾರಿಸಿದ ಹೈಟೆಕ್ 2-ನ್ಯಾನೊಮೀಟರ್ ಚಿಪ್ ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಅನಾವರಣಗೊಳಿಸಿದರು.
ಅವರು, ಸೆಮಿಕಂಡಕ್ಟರ್ ಉತ್ಪಾದನಾ ವಿನ್ಯಾಸದಲ್ಲಿ ನಮ್ಮ ದೇಶವು ಪ್ರಗತಿಯತ್ತ ಸಾಗುತ್ತಿದೆ. ಈ ಮೂಲಕ ಹೊಸ ಉದ್ಯಮವಾಗಿ ರೂಪ ತಳೆಯುತ್ತಿದೆ ಎಂದು ಹೇಳಿದರು.
ಸೆಮಿಕಂಡಕ್ಟರ್ ತಂತ್ರಜ್ಞಾನಗಳನ್ನು ಹೇಗೆ ವಿನ್ಯಾಸಗೊಳಿಸಲಾಗುತ್ತಿದೆ ಎಂಬ ವಿಚಾರದಲ್ಲಿ ಭಾರತವು ಹೆಚ್ಚು ಕೇಂದ್ರಬಿಂದುವಾಗಿದೆ. ಈ ಅಭಿವೃದ್ಧಿಯು ವಿನ್ಯಾಸ ಪರಿಸರ ವ್ಯವಸ್ಥೆಯ ಪ್ರಬುದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು 20ರಿಂದ 30 ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಹೊಸದಾಗಿ ವಿನ್ಯಾಸಗೊಳಿಸಲಾದ ವೇಫರ್ ಹೊಂದಿದ್ದು,ಇದು ಸುಮಾರು 20 ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಹೊಂದಿದೆ ಎಂದು ಸಚಿವರು ವಿವರಣೆ ನೀಡಿದರು. ಈ ಚಿಪ್ ಸಿಪಿಯು (CPU) ಮತ್ತು ಜಿಪಿಯು (GPU) ಎರಡನ್ನೂ ಸಂಯೋಜಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.
ಸೆಮಿಕಾನ್ ಇಂಡಿಯಾ ಮಿಷನ್ 1.0 ಅಡಿಯಲ್ಲಿ ಸರ್ಕಾರವು ಒಂದು ದಶಕದಲ್ಲಿ 85,000 ಸೆಮಿಕಂಡಕ್ಟರ್ ವೃತ್ತಿಪರರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಇಲ್ಲಿಯವರೆಗೆ, ಸುಮಾರು 67,000 ಸೆಮಿಕಂಡಕ್ಟರ್ ಎಂಜಿನಿಯರ್‌ಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು.



