ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೋಮವಾರ ದೆಹಲಿಯ ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದರು.
ಭೇಟಿಯ ಸಂದರ್ಭ ಯೋಗಿ ಪ್ರಧಾನಿ ಮೋದಿಗೆ ಮೀನಕರಿ ಕಲೆಯ ಮೂಲಕ ಸಿದ್ಧಪಡಿಸಿದ ರಾಮಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಪ್ರತಿಕೃತಿಯನ್ನು ಕುಂಜ್ ಬಿಹಾರಿ ಜಿ ತಯಾರಿಸಿದ್ದಾರೆ.
ಬಳಿಕ ಇಬ್ಬರೂ ಸಂಪುಟ ವಿಸ್ತರಣೆ ಹಾಗೂ 2027ರ ಚುನಾವಣೆ ಕುರಿತು ಚರ್ಚಿಸಿದರು. ಭೇಟಿ ಬಳಿಕ ಯೋಗಿ ಆದಿತ್ಯನಾಥ್ ತಮ್ಮ ಟ್ವಿಟರ್ ಖಾತೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನವು ಹೊಸ ಉತ್ತರ ಪ್ರದೇಶದ ಅಭಿವೃದ್ಧಿ ಪಯಣವನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ವೇಗಗೊಳಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿಯು ‘ಎಕ್ಸ್’ನಲ್ಲಿ ಭೇಟಿಯ ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿಯವರನ್ನು ಭೇಟಿ ಮಾಡಿದ್ದರು ಎಂದು ತಿಳಿಸಿದೆ. ಸುಮಾರು ಒಂದು ಗಂಟೆಗಳ ಕಾಲ ಇಬ್ಬರೂ ನಾಯಕರ ನಡುವೆ ಮಾತುಕತೆ ನಡೆದಿದೆ.

