ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಅಮೆರಿಕ ವಾಯುಪಡೆಯ ಶಕ್ತಿಶಾಲಿ ಅಸ್ತ್ರ ಥಂಡರ್‌ಬರ್ಡ್ F-16C ಯುದ್ಧವಿಮಾನ ಪತನಗೊಂಡಿದೆ.
ಲಾಸ್ ಏಂಜಲೀಸ್‌ನ ಉತ್ತರಕ್ಕೆ ಸುಮಾರು 290 ಕಿಮೀ ದೂರದಲ್ಲಿರುವ ಮೊಜಾವೆ ಮರುಭೂಮಿ ಪ್ರದೇಶದಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಎಫ್-16 ಜೆಟ್ ಪತನಗೊಂಡಿದೆ. ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ ಎಂದು ಯುಎಸ್ ವಾಯುಪಡೆ ತಿಳಿಸಿದೆ.
ಬುಧವಾರ ಬೆಳಗ್ಗೆ 10:45ರ ಸುಮಾರಿಗೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲಿಸುತ್ತಿವೆ ಎಂದು ತಿಳಿಸಿದೆ.
ಅಮೆರಿಕ ವಾಯುಪಡೆಯ F-16 ಫೈಟರ್ ಜೆಟ್ ಪತನ: ಇಡೀ ವಿಮಾನ ಬೆಂಕಿಗಾಹುತಿ

