ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಕದನ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆವಿದ್ದು, ಅತ್ತ ಅಮೆರಿಕ ಅಧ್ಯಕ್ಷ ಟ್ರಂಪ್ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ದಿಗ್ಬಂಧನ ವಿಧಿಸುವ ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಮತ್ತೆ ಇರಾನ್‌ನ ಸಣ್ಣ ಬೋಟ್ ಗಳನ್ನು ನಾಶಪಡಿಸುವ ವಾರ್ನಿಂಗ್ ನೀಡಿದೆ.
ಈ ಕುರಿತು ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಡೊನಾಲ್ಡ್ ಟ್ರಂಪ್, ನಮ್ಮ ಸೈನ್ಯವು ಇರಾನ್‌ನ ನೌಕಾ ಶಕ್ತಿಯನ್ನು ನಿರ್ನಾಮ ಮಾಡಿದೆ. 158 ಬೃಹತ್ ಯುದ್ಧ ನೌಕೆಗಳನ್ನು ಧ್ವಂಸಗೊಳಿಸಿವೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವು ವೇಗವಾಗಿ ದಾಳಿ ನಡೆಸುವ ಸಣ್ಣ ಹಡಗುಗಳು ಇದ್ದಿರಬಹುದು. ಆದರೆ ಅವು ತಮ್ಮ ದಿಗ್ಬಂಧನದ ಹತ್ತಿರ ಬಂದರೆ ನಾಶಪಡಿಸಲಾಗುವುದು ಎಂದು ಗುಡುಗಿದ್ದಾರೆ.
ಈ ಕಾರ್ಯಾಚರಣೆಯನ್ನು ಟ್ರಂಪ್ ಅಮೆರಿಕದ ಡ್ರಗ್ಸ್ ಮಾಫಿಯಾ ವಿರುದ್ಧದ ಹೋರಾಟಕ್ಕೆ ಹೋಲಿಸಿದ್ದು, ಯಾವ ರೀತಿ ಅಮೆರಿಕ ಸಮುದ್ರ ಮಾರ್ಗದ ಮೂಲಕ ಬರುವ ಮಾದಕ ದ್ರವ್ಯಗಳನ್ನು ತಡೆಯಲು ಸಿಸ್ಟಮ್ ಆಫ್ ಕಿಲ್ ಬಳಸುತ್ತೇವೆಯೋ, ಅದೇ ರೀತಿ ಇರಾನ್ ಹಡಗುಗಳ ವಿರುದ್ಧವೂ ಹೋರಾಟ ನಡೆಸುತ್ತದೆ. ಈಗಾಗಲೇ ನಾವು ಮಾದಕ ದ್ರವ್ಯ ಸಾಗಾಟವನ್ನು ತಡೆದಿದ್ದೇವೆ, ಅದೇ ರೀತಿ ಇರಾನ್ ಹಡಗುಗಳನ್ನು ತಡೆಯುತ್ತೇವೆ ಎಂದು ತಿಳಿಸಿದ್ದಾರೆ.



