ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ H-1B ವೀಸಾಗಳ ಶುಲ್ಕವನ್ನು ಹೆಚ್ಚಳ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದು, ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮೇಲೆ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಈ ವೀಸಾ ಶುಲ್ಕ ಏರಿಕೆ ವರದಿಗಳನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತ್ತೊಮ್ಮೆ ನಾನು ಹೇಳುತ್ತೇನೆ ಭಾರತದ ದುರ್ಬಲ ಪ್ರಧಾನಿಯನ್ನು ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಈ ವಿಚಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ದುರ್ಬಲ ಪ್ರಧಾನಿ ಎಂದು ಆರೋಪಿಸಿದ್ದು, ಇದು ಹುಟ್ಟು ಹಬ್ಬದ ಉಡುಗೊರೆಯಾಗಿದೆ. ಈ ಬಾರಿ ಟ್ರಂಪ್ ಸರ್ಕಾರ. H-1B ವೀಸಾ ಶುಲ್ಕ ಹೆಚ್ಚಳವೂ ಈ ವೀಸಾ ಹೊಂದಿರುವ ಶೇ 70ರಷ್ಟು ಜನರ ಮೇಲೆ ಬೀರಲಿದೆ. ಈಗಾಗಲೇ ಶೇ 50ರಷ್ಟು ಸುಂಕ ಹೇರಿಕೆ ಮಾಡಲಾಗಿದ್ದು, 10 ವಲಯಗಳಲ್ಲಿ ಈಗಾಗಲೇ 2.17 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ಗೌರವ್ ಗೊಗೋಯ್ , ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಅಮೆರಿಕ ಸರ್ಕಾರದ ಈ ವೀಸಾ ಹೆಚ್ಚಳ ನಿರ್ಧಾರವೂ ಭಾರತದಲ್ಲಿನ ಭವಿಷ್ಯದ ಅತ್ಯುತ್ತಮ ಮತ್ತು ಪ್ರತಿಭಾನ್ವಿತರ ಮೇಲೆ ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.