ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮಹಿಳಾ ವಿಶ್ವಕಪ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಸದ್ಯ ನವಿ ಮುಂಬೈನಲ್ಲಿ ಜೋರು ಮಳೆ ಸುರಿಯುತ್ತಿದ್ದು ಟಾಸ್ ವಿಳಂಬವಾಗಲಿದೆ.
ಮೈದಾನಕ್ಕೆ ಕವರ್‌ಗಳನ್ನು ಹಾಕಲಾಗಿದೆ. ಸದ್ಯ ಮಳೆ ನಿಲ್ಲುವ ಸೂಚನೆ ಕಾಣುವಂತಿಲ್ಲ.
ಫೈನಲ್ ಪಂದ್ಯದ ಮಳೆ ನಿಯಮ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಇಂದು ಮಳೆಯಿಂದ ಪಂದ್ಯ ಅರ್ಧಕ್ಕೆ ನಿಂತರೆ ಮೀಸಲು ದಿನವಾದ ಸೋಮವಾರ(ನ.3) ಪಂದ್ಯ ನಿಂತದಲ್ಲಿಂದ ಆರಂಭಗೊಳ್ಳಲಿದೆ. ಎರಡೂ ದಿನ ಹೆಚ್ಚುವರಿ ಸಮಯ ಕೂಡ ನೀಡಲಾಗಿದೆ. ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 20 ಓವರ್ ಆಡಬೇಕು. ಮೀಸಲೂ ದಿನವೂ ಮಳೆ ಅಡ್ಡಿಪಡಿಸಿದರೆ, ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

                                    