ನಮ್ಮ ಹಿರಿಯರು “ಬೆಳಗ್ಗೆ ಎದ್ದ ತಕ್ಷಣ ಏನು ನೋಡುತ್ತೇವೋ ಅದೇ ದಿನದ ಶುಭ ಅಶುಭಕ್ಕೆ ಕಾರಣ” ಎಂದು ಹೇಳುತ್ತಿದ್ದ ಮಾತಿನ ಹಿಂದೆ ಜ್ಯೋತಿಷ್ಯ ಮತ್ತು ಶಾಸ್ತ್ರಾಧಾರಿತ ನಂಬಿಕೆ ಇದೆ. ನಿದ್ರೆಯಿಂದ ಎದ್ದ ಕ್ಷಣದಿಂದಲೇ ನಮ್ಮ ಮನಸ್ಸು ಮತ್ತು ಶಕ್ತಿಸ್ರೋತಗಳು ದಿನದ ಕಾರ್ಯಗಳಿಗೆ ತಯಾರಾಗುತ್ತವೆ. ಆ ಸಮಯದಲ್ಲಿ ಕಾಣುವ ದೃಶ್ಯಗಳು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತವೆ ಎಂಬುದು ಶಾಸ್ತ್ರಗಳ ಅಭಿಪ್ರಾಯ. ಆದ್ದರಿಂದ ಬೆಳಗಿನ ಮೊದಲ ನೋಟವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಎಂದು ಜ್ಯೋತಿಷ್ಯ ಸೂಚಿಸುತ್ತದೆ.
ಬೆಳಿಗ್ಗೆ ನೋಡಬಾರಾದ ವಸ್ತುಗಳು
- ಎಂಜಲು ಪಾತ್ರೆಗಳು: ರಾತ್ರಿ ಉಳಿದ ಎಂಜಲು ಪಾತ್ರೆಗಳನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡುವುದು ದಾರಿದ್ರ್ಯ ಮತ್ತು ಆರ್ಥಿಕ ಅಡಚಣೆಗೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ.
- ಕನ್ನಡಿ: ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡುವುದು ಅಶುಭವೆಂದು ನಂಬಲಾಗಿದೆ. ನಿದ್ರೆಯಿಂದ ಎದ್ದಾಗ ಇರುವ ನಕಾರಾತ್ಮಕ ಶಕ್ತಿ ಕನ್ನಡಿಯಲ್ಲಿ ಪ್ರತಿಫಲಿಸಿ ಮನಸ್ಸಿನಲ್ಲಿ ಆಲಸ್ಯ ಮತ್ತು ಅಸಹಜತೆಯನ್ನು ಉಂಟುಮಾಡಬಹುದು.
- ಒಡೆದ ಗಡಿಯಾರ ಅಥವಾ ನಿಂತುಹೋದ ಗಡಿಯಾರ: ಇವು ಜೀವನದಲ್ಲಿ ಸ್ಥಗಿತ, ವಿಳಂಬ ಮತ್ತು ಅಡೆತಡೆಗಳ ಸಂಕೇತ ಎಂದು ಶಾಸ್ತ್ರಗಳು ಹೇಳುತ್ತವೆ.
- ಹಿಂಸಾತ್ಮಕ ವಸ್ತುಗಳು ಮತ್ತು ಚಿತ್ರಗಳು: ಚಾಕು, ಕತ್ತರಿ ಅಥವಾ ಯುದ್ಧದ ಚಿತ್ರಗಳು ಬೆಳಿಗ್ಗೆ ಮನಸ್ಸಿನಲ್ಲಿ ಕೋಪ ಮತ್ತು ಆತಂಕವನ್ನು ಹೆಚ್ಚಿಸಬಹುದು.
- ಕಸದ ಬುಟ್ಟಿ ಅಥವಾ ಖಾಲಿ ಪಾತ್ರೆ: ಮನೆಯಿಂದ ಹೊರಡುವಾಗ ಇವುಗಳನ್ನು ನೋಡುವುದು ಕಾರ್ಯವಿಘ್ನಕ್ಕೆ ಕಾರಣವಾಗಬಹುದು.
ಶುಭಾರಂಭಕ್ಕೆ ಏನು ಮಾಡಬೇಕು?
ಬೆಳಗ್ಗೆ ಎದ್ದ ತಕ್ಷಣ ಅಂಗೈಗಳನ್ನು ನೋಡಿ ದೇವರನ್ನು ಸ್ಮರಿಸುವುದು, ದೇವರ ಚಿತ್ರ, ತುಳಸಿ ಗಿಡ ಅಥವಾ ಸೂರ್ಯದರ್ಶನ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಮನೆಯಿಂದ ಹೊರಡುವಾಗ ಹಿರಿಯರ ಆಶೀರ್ವಾದ, ಗೋವಿನ ದರ್ಶನ ಅಥವಾ ಮೊಸರು ಸೇವನೆ ಶುಭಫಲಕ್ಕೆ ಕಾರಣವಾಗುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

