ಕೆಲವು ಮನೆಗಳಲ್ಲಿ ಎಲ್ಲವೂ ಇದ್ದರೂ ಮನಸ್ಸಿಗೆ ನೆಮ್ಮದಿ ಇರೋದಿಲ್ಲ. ದಿನದಿಂದ ದಿನಕ್ಕೆ ಜಗಳ, ಅಸಮಾಧಾನ, ಒತ್ತಡ ಹೆಚ್ಚಾಗ್ತಾ ಹೋಗುತ್ತೆ. ಇದಕ್ಕೆ ಕೇವಲ ವ್ಯಕ್ತಿಗಳ ಸ್ವಭಾವವಷ್ಟೇ ಕಾರಣ ಅಲ್ಲ, ಕೆಲವೊಮ್ಮೆ ಮನೆಯ ವಾಸ್ತು ದೋಷವೂ ದೊಡ್ಡ ಪಾತ್ರ ವಹಿಸುತ್ತದೆ ಎನ್ನುವುದು ವಾಸ್ತು ತಜ್ಞರ ಅಭಿಪ್ರಾಯ. ಸರಳವಾದ ಕೆಲವು ವಾಸ್ತು ಕ್ರಮಗಳನ್ನು ಅನುಸರಿಸಿದರೆ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಕಡಿಮೆಯಾಗಿ, ಶಾಂತಿ ಮತ್ತು ಸಂತೋಷ ಮತ್ತೆ ನೆಲೆಸಬಹುದು.
- ದೇವರ ಕೋಣೆಯಲ್ಲಿ ಧೂಪ ದೀಪ – ಪ್ರತಿದಿನ ಬೆಳಿಗ್ಗೆ ದೇವರ ಕೋಣೆಯಲ್ಲಿ ಧೂಪ ಹಚ್ಚುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ.
- ಮನೆಯ ಸ್ವಚ್ಛತೆ – ಅಶುಚಿತ್ವ ಇರುವ ಮನೆಗಳಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಸದಾ ಸ್ವಚ್ಛತೆ ಕಾಪಾಡುವುದು ಅನಿವಾರ್ಯ.
- ತುಳಸಿ ಗಿಡ ನೆಡುವುದು – ತುಳಸಿ ಮನೆಗೆ ಶುಭಶಕ್ತಿಯನ್ನು ಆಹ್ವಾನಿಸಿ ವಾಸ್ತು ದೋಷವನ್ನು ಕಡಿಮೆ ಮಾಡುತ್ತದೆ.
- ಅರಿಶಿನ ನೀರು ಸಿಂಪಡಣೆ – ಮುಖ್ಯ ದ್ವಾರದ ಬಳಿ ಅರಿಶಿನ ನೀರು ಸಿಂಪಡಿಸುವುದು ನಕಾರಾತ್ಮಕ ಶಕ್ತಿಯನ್ನು ಶಾಂತವಾಗಿಸುತ್ತದೆ.
- ಕರ್ಪೂರ ದೀಪ – ರಾತ್ರಿ ಮಲಗುವ ಮುನ್ನ ಕರ್ಪೂರ ಸುಡುವುದರಿಂದ ಮನಸ್ಸು ಮತ್ತು ಮನೆ ಎರಡಕ್ಕೂ ಶಾಂತಿ ಸಿಗುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ)

