ಗುಲಾಬಿ ಹೂವು ಎಂದರೆ ಕೇವಲ ಸೌಂದರ್ಯ ಅಥವಾ ಪರಿಮಳವಲ್ಲ. ಅದು ಪ್ರೀತಿ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತ. ಪೂಜೆ, ಅಲಂಕಾರ ಅಥವಾ ಉಡುಗೊರೆಯ ಭಾಗವಾಗಿ ಗುಲಾಬಿಯನ್ನು ಬಳಸುವ ಪರಂಪರೆ ಶತಮಾನಗಳಿಂದಲೂ ಇದೆ. ಆದರೆ ಮನೆಯಲ್ಲಿ ನಿಜವಾದ ಗುಲಾಬಿ ಗಿಡವನ್ನು ನೆಡುವುದರಿಂದ ಸೌಂದರ್ಯಕ್ಕಿಂತ ಹೆಚ್ಚಾಗಿ ಶಕ್ತಿಯ ಅಂಶವೂ ಒಳಗೊಂಡಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಇದು ಮನೆಯಲ್ಲಿ ಆನಂದ, ಸಮೃದ್ಧಿ ಮತ್ತು ಶಾಂತಿಯನ್ನು ತರುತ್ತದೆ. ತಪ್ಪಾದ ದಿಕ್ಕಿನಲ್ಲಿ ನೆಟ್ಟರೆ ಕುಟುಂಬದಲ್ಲಿ ಕಲಹ ಮತ್ತು ಅಶಾಂತಿ ಉಂಟಾಗಬಹುದು ಎಂಬ ನಂಬಿಕೆಯಿದೆ. ಆದ್ದರಿಂದ, ಗುಲಾಬಿ ಗಿಡವನ್ನು ಮನೆಯಲ್ಲಿ ನೆಡುವ ಮೊದಲು ಅದರ ವಾಸ್ತು ಪ್ರಭಾವ ತಿಳಿದುಕೊಳ್ಳುವುದು ಅತ್ಯವಶ್ಯಕ.
ವಾಸ್ತು ತಜ್ಞರ ಪ್ರಕಾರ, ಗುಲಾಬಿ ಗಿಡವನ್ನು ಮನೆಯ ಹೊರಭಾಗದಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನೆಡುವುದು ಅತ್ಯಂತ ಶುಭಕರ. ಈ ದಿಕ್ಕುಗಳು ಸೂರ್ಯನ ಶಕ್ತಿ ಹಾಗೂ ಪವಿತ್ರ ವಾಯುವಿನ ಪ್ರವೇಶಕ್ಕೆ ಕಾರಣವಾಗುತ್ತವೆ, ಅದು ಮನೆಯೊಳಗೆ ಸಕಾರಾತ್ಮಕತೆಯನ್ನು ತರುತ್ತದೆ.
ಮನೆಯ ಒಳಗೆ ಗುಲಾಬಿ ಗಿಡವನ್ನು ಇಡುವುದು ವಾಸ್ತು ಪ್ರಕಾರ ಸೂಕ್ತವಲ್ಲ ಎಂದು ತಜ್ಞರು ಸೂಚಿಸುತ್ತಾರೆ. ಲಕ್ಷ್ಮೀ ದೇವಿಗೆ ಕೆಂಪು ಬಣ್ಣದ ಗುಲಾಬಿಗಳು ಅತ್ಯಂತ ಪ್ರಿಯವಾದುದರಿಂದ, ಕೆಂಪು ಗುಲಾಬಿ ಗಿಡವನ್ನು ಮನೆಯ ಆವರಣದಲ್ಲಿ ನೆಟ್ಟರೆ ಧನ, ಐಶ್ವರ್ಯ ಮತ್ತು ಸಂತೋಷ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.
ಹೀಗಾಗಿ, ಮನೆಯಲ್ಲಿ ಗುಲಾಬಿ ಗಿಡವನ್ನು ನೆಡುವುದು ಕೇವಲ ಅಲಂಕಾರಕ್ಕಾಗಿ ಅಲ್ಲ. ಅದು ಸಂತೋಷ, ಪ್ರೀತಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

