ನಿಮ್ಮ ಮನೆಯಲ್ಲಿ ಶಾಂತಿ, ಆರೋಗ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸೋಕೆ ಈಶಾನ್ಯ ದಿಕ್ಕು ತುಂಬಾ ಒಳ್ಳೆಯದಂತೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಈಶಾನ್ಯ ಕೋನವು ಅತಿ ಪವಿತ್ರ ದಿಕ್ಕಾಗಿದೆ. ಈ ದಿಕ್ಕನ್ನು ದೇವರುಗಳ ದಿಕ್ಕು, ಶ್ರೇಷ್ಠ ಆಧ್ಯಾತ್ಮಿಕ ಶಕ್ತಿ ಪ್ರವೇಶಿಸುವ ಮಾರ್ಗವೆಂದು ಹೇಳಲಾಗುತ್ತೆ.
- ಖಾಲಿ ಮತ್ತು ಪ್ರಕಾಶಮಾನವಾಗಿರಲಿ: ಈಶಾನ್ಯ ದಿಕ್ಕು ಯಾವಾಗಲೂ ಹಗುರವಾಗಿ, ಸ್ವಚ್ಛವಾಗಿ ಇರಬೇಕು. ಭಾರವಾದ ಕಬ್ಬಿಣದ ಕಪಾಟು, ಮರದ ಪೀಠೋಪಕರಣ ಅಥವಾ ಮುಳ್ಳಿನ ವಸ್ತುಗಳನ್ನು ಇಲ್ಲಿ ಇರಿಸಬೇಡಿ.
- ನೀರಿನ ಮೂಲ: ಸಣ್ಣ ಕಾರಂಜಿ, ನೀರಿನ ಬಟ್ಟಲು ಅಥವಾ ಅಕ್ವೇರಿಯಂ ಇರಿಸುವುದು ಶಕ್ತಿ ಹರಿವನ್ನು ಸುಧಾರಿಸುತ್ತದೆ.
- ಬಣ್ಣದ ಆಯ್ಕೆ: ತಿಳಿ ನೀಲಿ, ಹಳದಿ ಅಥವಾ ಬಿಳಿ ಬಣ್ಣಗಳು ಸೂಕ್ತ. ಕೆಂಪು, ಕಪ್ಪು ಅಥವಾ ಗಾಢ ಬಣ್ಣಗಳನ್ನು ತಪ್ಪಿಸಬೇಕು.
- ಪೂಜಾ ಸ್ಥಳ: ಈಶಾನ್ಯ ದಿಕ್ಕಿನಲ್ಲಿ ಪೂಜಾ ಸ್ಥಳ ಇರಿಸಿಕೊಂಡು ಪ್ರತಿದಿನ ಸ್ವಲ್ಪ ಸಮಯ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)